ಮುತ್ತು ಕೊಡೋದೇನು..? ಮುದ್ದಾಡೋದೇನು..? ಫ್ರೆಂಡ್​ಶಿಪ್ ಅಂದ್ರೆ ಇದು..!

‘ಏ.. ನಮ್ಮನೇಲಿ ನಾಯಿ ಐತೆ ಗೊತ್ತಾ..? ಹೆಚ್ಗೆ ಹಾರಾಡಿದ್ರೆ ಕಚ್ಚಿಸಿ ಬಿಡ್ತೀನಿ..’ ‘ನಮ್ಮನೇಲಿ ಬೆಕ್ಕು ಇದೆ ಗೊತ್ತಾ..!!!!? ಹೆಂಗೆ ಉಗುರು ಹೊಡೆಯುತ್ತೆ ಅಂದ್ರೆ.. ’ ಹೀಗೆ.. ಚಿಕ್ ಮಕ್ಕಳು ಒಂದ್ಕಡೆ ಸೇರಿ ಬಿಟ್ರೆ ಸಾಕು ಇಂಥ ನೂರಾರು ಮಾತುಗಳು ಬಂದು ಹೋಗುತ್ವೆ..

ಅಂದ್ಹಾಗೆ ಮಕ್ಕಳಿಗೆ ಪ್ರಾಣಿಗಳಂದ್ರೆ ಪಂಚ ಪ್ರಾಣ, ನಾಯಿ, ಬೆಕ್ಕು, ಹಸು ಇವ್ಗಳ ಜೊತೆ ಸ್ನೇಹ ಬೆಳಸ್ತಾರೆ.. ಎಲ್ಲಾದ್ರೂ ಹುಲಿ, ಸಿಂಹಗಳ ಜತೆ ಫ್ರೆಂಡ್​ಶಿಪ್ ಮಾಡಿರೋ ಬಗ್ಗೆ ಕೇಳಿದ್ರಾ..? ಹುಲಿ, ಸಿಂಹ ಅಂದ್ರನೇ ಬೆಚ್ಚಿ ಬೀಳುವ ಮಕ್ಕಳನ್ನ ನೋಡಿದ್ದೇವೆ. ಆದ್ರೆ ಚೀನಾದ 9 ವರ್ಷದ ಬಾಲಕಿ ಹುಲಿ ಮರಿ ಜೊತೆ ಫ್ರೆಂಡ್​ಶಿಪ್ ಮಾಡಿ ಸಖತ್ ಫೇಮಸ್ ಆಗಿದ್ದಾಳೆ.

ಸೌಥ್​ ಚೀನಾದ ಪ್ರಾಣಿ ಸಂಗ್ರಾಲಯ ಒಂದರಲ್ಲಿ ಹುಲಿ ಮರಿಯೊಂದು ಇದೆ. ಅದರ ಜೊತೆ ಸುನ್ ಕ್ಸಿಯೊಜಿಂಗ್ ಅನ್ನೋ ಬಾಲಕಿ ಸ್ನೇಹ ಬೆಳೆಸಿದ್ದಾಳೆ. ಪ್ರಾಣಿ ಸಂಗ್ರಾಲಯವನ್ನ ನೋಡಿಕೊಳ್ಳುವ ಸಿಬ್ಬಂದಿ ಮಗಳಾಗಿರುವ ಈಕೆ ಕಳೆದ ಮೂರು ತಿಂಗಳಿಂದ ಹುಲಿ ಮರಿ ಜೊತೆ ಆಟವಾಡಿ ಕಾಲ ಕಳೆಯುತ್ತಿದ್ದಾಳೆ.
ಹುಲಿ ಮರಿ ಕೂಡ ಬಾಲಕಿ ಜೊತೆ ಅನೋನ್ಯವಾಗಿದೆ. ಈ ಇಬ್ಬರ ಸ್ನೇಹ ಅಲ್ಲಿಗೆ ಬರುವ ಪ್ರವಾಸಿಗರನ್ನ ಆಕರ್ಷಿಸುತ್ತಿದೆ. ಕೆಲ ಫೋಟೋಗಳು ಇಂಟರ್​ನೆಟ್​ನಲ್ಲಿ ವೈರಲ್​ ಆಗಿದೆ.