ಆಹಾರ ಮೇಳ ಉದ್ಘಾಟಿಸಿ, ತಾನೂ ಸವಿದು ಇತರರಿಗೂ ಉಣಿಸಿದ ಸಚಿವ ಜಮೀರ್..!

ಮೈಸೂರು: ದಸರಾ ಹಬ್ಬದ ಅಂಗವಾದ ಆಹಾರ ಮೇಳ ಕಾರ್ಯಕ್ರಮವನ್ನು ಸಚಿವ ಜಮೀರ್ ಅಹಮ್ಮದ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, 408 ವರ್ಷಗಳ ಇತಿಹಾಸ ಇರುವ ದಸರಾ ಮಹೋತ್ಸವ ನಡೆಯುತ್ತಿದೆ. ನಾಡ ಹಬ್ಬಕ್ಕೆ ರಾಜ್ಯದೆಲ್ಲೆಡೆಯ ಜನರು ಭಾಗವಹಿಸಬೇಕು. ನಾನೂ ಕೂಡಾ ರಾಜಕೀಯಕ್ಕೆ ಬರುವ ಮೊದಲು ನಮ್ಮ ಅಜ್ಜನ ಜೊತೆ ದಸರಾಗೆ ಬರ್ತಿದ್ದೆ ಅಂತಾ ತಮ್ಮ ಬಾಲ್ಯವನ್ನು ನೆನಪಿಸಿಕೊಂಡ್ರು.

ವಿಶೇಷ ಅಂದ್ರೆ ಜಮೀರ್​, ಅಂಧ ಮಕ್ಕಳೊಂದಿಗೆ ಪಂಕ್ತಿಯಲ್ಲಿ ಕೂತು ಭೋಜನ ಸವಿದರು. ಅವರಿಗೂ ಉಣಿಸಿದರು ಬಳಿಕ ಅಲ್ಲಿ ನೆರೆದಿದ್ದ ಕಾರ್ಯಕರ್ತರು, ಪೊಲೀಸ್​ ಅಧಿಕಾರಿಗಳು, ಪೇದೆಗಳಿಗೆ, ಸ್ವಯಂ ಸೇವಕರಿಗೆ ತುತ್ತು ನೀಡಿದರು. ತಮ್ಮ ಊಟ ಆದ ಬಳಿಕ ಮತ್ತೊಂದು ಪಂಕ್ತಿಗೆ ಊಟ ಬಡಿಸಿದರು. ದಸರಾದಲ್ಲಿ ಈ ಬಾರಿ ಒಟ್ಟು 98 ವಿವಿಧ ಬಗೆಯ ಫುಡ್ ಸ್ಟಾಲ್ ಗಳಿವೆ ಜನರು ಉಪಯೋಗಿಸಿಕೊಳ್ಳಬಹುದು ಅಂತಾ ಸಚಿವರು​ ಹೇಳಿದರು. ಒಟ್ಟಿನಲ್ಲಿ ಸದಾ ತಮ್ಮ ಹೇಳಿಕೆಗಳಿಂದಲೇ ವಿವಾದ ಸೃಷ್ಟಿಸಿಕೊಳ್ಳುತ್ತಿದ್ದ ಸಚಿವ ಜಮೀರ್, ಇಂದು ತಮ್ಮ ನಡವಳಿಕೆಯಿಂದ ಜನ ಹಾಗೂ ಕಾರ್ಯಕರ್ತರ ಮನ ಗೆದ್ದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv