‘HDK ಸಿಎಂ ಆಗಿರೋದ್ರಿಂದ ಜೆಡಿಎಸ್ ಜನ ಪ್ರತಿನಿಧಿಗಳು ಹೆಚ್ಚಾಗಿದ್ದಾರೆ’

ಮೈಸೂರು: ಕಳೆದ ಬಾರಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ರು. ಹಾಗಾಗಿ ಕಾಂಗ್ರೆಸ್​ನವರು ಹೆಚ್ಚಾಗಿ ಭಾಗವಹಿಸಿದ್ದರು. ಈ ಬಾರಿ ಕುಮಾರಸ್ವಾಮಿ ಸಿಎಂ ಆಗಿರೋದ್ರಿಂದ ಜೆಡಿಎಸ್ ಜನಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ ಅಷ್ಟೇ ಅಂತಾ ಸಚಿವ ಜಮೀರ್ ಅಹಮ್ಮದ್ ಹೇಳಿದ್ದಾರೆ.

ದಸರಾ ಹಬ್ಬದ ಅಂಗವಾದ ಆಹಾರ ಮೇಳ ಕಾರ್ಯಕ್ರಮವನ್ನು ಜಮೀರ್ ಅಹಮ್ಮದ್ ಉದ್ಘಾಟಿಸಿದರು. ಬಳಿಕ ಮಹಿಷ, ಟಿಪ್ಪು ಜಯಂತಿ ಆಚರಣೆಗೆ ಸಂಸದ ಪ್ರತಾಪ್ ಸಿಂಹರ ಆಕ್ಷೇಪಣೆ ವಿಚಾರವಾಗಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಬರ್ತಿದೆ ಅಂತ ಪ್ರತಾಪ್ ಸಿಂಹ ಕಾಂಟ್ರವರ್ಸಿ ಹೇಳಿಕೆ ನೀಡ್ತಿದ್ದಾರೆ. ಜನ ಬರುವ ಚುನಾವಣೆಯಲ್ಲಿ ಅವರಿಗೆ ಪಾಠ ಕಲಿಸುತ್ತಾರೆ ಅಂತಾ ಹೇಳಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv