ಮೈಸೂರಿನಲ್ಲಿ ಬೀಡು ಬಿಟ್ಟ ‘ಯುವರತ್ನ’ ಟೀಂ..!

ಪವರ್​ ಸ್ಟಾರ್​ ಪುನೀತ್ ರಾಜ್​ಕುಮಾರ್ ಮತ್ತು ಸಂತೋಷ್ ಆನಂದ್ ರಾಮ್ ಕಾಂಬಿನೇಷನ್​ನ ಯುವರತ್ನ ಚಿತ್ರದ ಶೂಟಿಂಗ್ ಭರದಿಂದ ಸಾಗ್ತಿದೆ. ಈ ನಡುವೆ ಚಿತ್ರತಂಡ ಮುಂದಿನ ಶೆಡ್ಯೂಲ್​ಗಾಗಿ ಲೋಕೆಷನ್ ಹಂಟ್​ ಕೂಡ ಶುರುಮಾಡಿದೆ. ಸದ್ಯ ನಿರ್ದೇಶಕ ಸಂತೋಷ್ ಆನಂದ್ ರಾಮ್ ಹಾಗೂ ಕಲಾ ನಿರ್ದೇಶಕ ಶಿವಕುಮಾರ್ ಸೇರಿದಂತೆ ಇಡೀ ಚಿತ್ರತಂಡ ಮೈಸೂರಿನಲ್ಲಿ ಸೆಟ್ ಹಾಕೋಕೆ ಪ್ಲಾನ್ ಮಾಡಿದ್ದು ಅಲ್ಲಿಯೇ ಬೀಡು ಬಿಟ್ಟಿದೆ.

ಪುನೀತ್​ ನಟನೆಯ 29 ನೇ ಸಿನಿಮಾ ಇದಾಗಿದ್ದು ಚಿತ್ರದಲ್ಲಿ ಕಾಲೇಜ್ ಸ್ಟೂಡೆಂಟ್‌ ಗೆಟಪ್​ನಲ್ಲಿ ಅಪ್ಪು ಮಿಂಚಲಿದ್ದಾರೆ. ನಾಯಕಿಯಾಗಿ ಬಾಲಿವುಡ್​ ಬೆಡಗಿ ಸಾಯೇಷ ಸೈಗಲ್ ಜೊತೆಯಾಗಿದ್ದು ಜೊತೆಗೆ ಬೊಮಾನ್ ಇರಾನಿ, ರಾಧಿಕಾ ಶರತ್ ಕುಮಾರ್, ಡಾಲಿ ಧನಂಜಯ್ ಸೇರಿದಂತೆ ಬಹುತೇಕ ತಾರೆಯರು ನಟಿಸಿದ್ದಾರೆ. ಈ ಹಿಂದೆ ಮಲ್ಪೆ, ಮಂಗಳೂರು ಸೇರಿದಂತೆ ಬಹುತೇಕ ಕಡೆಗಳಲ್ಲಿ ಶೂಟಿಂಗ್ ನಡೆಸಿದ್ದ ಚಿತ್ರತಂಡ, ಇದೀಗ ಮೈಸೂರಿಗೂ ಲಗ್ಗೆ ಇಟ್ಟಿದೆ. ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತವಿದ್ದು ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರು ಬಂಡವಾಳ ಹೂಡಿದ್ದಾರೆ.