ನ್ಯೂಯಾರ್ಕ್​​​ ರಸ್ತೆಗಳಲ್ಲಿ ಬಾಲಿವುಡ್​ ಹಾಡಿಗೆ ಡ್ಯಾನ್ಸ್​: ಜನರ ರಿಯಾಕ್ಷನ್​​ ಹೇಗಿತ್ತು ನೋಡಿ

ಯೂಟ್ಯೂಬರ್​ವೊಬ್ಬರು ನ್ಯೂಯಾರ್ಕ್​ನ್ ಬೀದಿಗಳಲ್ಲಿ ಬಾಲಿವುಡ್​​ ಹಾಡುಗಳಿಗೆ ಸ್ಟೆಪ್ಸ್​​​ ಹಾಕಿರೋ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಜೂನ್​​ 29ರಂದು ಈ ವಿಡಿಯೋವನ್ನು ಅಪ್​ಲೋಡ್​​​ ಮಾಡಲಾಗಿದೆ. ಯೂಟ್ಯೂಬರ್​ ಕ್ಯೂ ಪಾರ್ಕ್​​​ ಇದ್ದಕ್ಕಿದ್ದಂತೆ ರಸ್ತೆಯಲ್ಲೇ ಎಲ್ಲರ ಮುಂದೆ ಹಿಂದಿ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ.

ನ್ಯೂಯಾರ್ಕ್​ ಮೂಲದವರಾದ ಕ್ಯೂ ಪಾರ್ಕ್, ಈ ರೀತಿ ಸ್ಟ್ರೀಟ್​ ಡ್ಯಾನ್ಸಿಂಗ್​ ಮಾಡಿಕೊಂಡೇ ಫೇಮಸ್​ ಆದವರು. ಈ ವಿಡಿಯೋದಲ್ಲಿ ​​ಚೋಲಿ ಕೆ ಪೀಚೆ ಕ್ಯಾ ಹೇ ಯಿಂದ ಹಿಡಿದು ಚಮ್ಮಕ್​​ ಚಲ್ಲೋ, ಪ್ರೇಮ್​ ರತನ್​ ಧನ್​ ಪಾಯೋ ಹಾಡಿನವರೆಗೆ ಹಲವು ಬಾಲಿವುಡ್​​ ಹಾಡುಗಳ ಸ್ಟೆಪ್ಸ್​​ ಅನುಕರಿಸಿದ್ದಾರೆ. ಕ್ಯೂ ಪಾರ್ಕ್​ ಪಬ್ಲಿಕ್​​ನಲ್ಲೇ ಎಲ್ಲೆಂದರಲ್ಲಿ ಒಬ್ಬರೇ ಡ್ಯಾನ್ಸ್​ ಮಾಡೋದು ಕಂಡು ಅಲ್ಲಿದ್ದವರು, ಇವನಿಗೇನಾದ್ರೂ ಹುಚ್ಚಾ ಅಂತ ಕಣ್ ಕಣ್​ ಬಿಟ್ಟು ನೋಡೋದನ್ನೂ ವಿಡಿಯೋದಲ್ಲಿ ಗಮನಿಸಬಹುದು. ​

ಈ ವಿಡಿಯೋವನ್ನ ಯೂಟ್ಯೂಬ್​​​​ನಲ್ಲಿ ಶೇರ್​ ಮಾಡಿದಾಗಿನಿಂದ ಈವರೆಗೆ 6 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ. ಇನ್ನು ಫೇಸ್​​ಬುಕ್​ನಲ್ಲಿ 30 ಲಕ್ಷಕ್ಕೂ ಹೆಚ್ಚು ವ್ಯೂವ್ಸ್​​ ಸಿಕ್ಕಿದ್ದು, 51 ಸಾವಿರಕ್ಕೂ ಹೆಚ್ಚು ಬಾರಿ ಶೇರ್​ ಆಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv