ಗಾಯಗೊಂಡ ಕೋತಿಗೆ ಚಿಕಿತ್ಸೆ ಕೊಡಿಸಿ, ಮಾನವೀಯತೆ ಮೆರೆದ ಕಲ್ಪತರು ಬಾಯ್ಸ್​​​..!

ತುಮಕೂರು: ರಸ್ತೆಯಲ್ಲಿ ಗಂಭೀರವಾಗಿ ಗಾಯಗೊಂಡು ಬಿದ್ದಿದ್ದ ಕೋತಿಗೆ ಚಿಕಿತ್ಸೆ ಕೊಡಿಸುವ ಮೂಲಕ ತುಮಕೂರು ಯುವಕರು ಮಾನವೀಯತೆ ಮೆರೆದಿದ್ದಾರೆ. ದೇವರಾಯನದುರ್ಗ ಬಳಿ ತಡರಾತ್ರಿ ಈ ಘಟನೆ ನಡೆದಿದೆ.
ಇಲ್ಲಿನ ಹನುಮಂತಪುರ ನಿವಾಸಿಗಳಾದ ನವೀನ್​​ ಚೇತನ್​​​​, ರಾಜೇಶ್​​ ಹಾಗೂ ಮಂಜು ಎಂಬುವರು ದೇವರಾಯನದುರ್ಗ ಪ್ರವಾಸ ಮುಗಿಸಿಕೊಂಡು ತಡರಾತ್ರಿ ಕಾರಿನಲ್ಲಿ ವಾಪಸ್ಸಾಗುತ್ತಿದ್ದರು.

ಈ ವೇಳೆ ರಸ್ತೆ ಮಧ್ಯೆ ಗಾಯಗೊಂಡು ಬಿದ್ದಿದ್ದ ಕೋತಿಯನ್ನು ನೋಡಿದ ಯುವಕರು, ಕಾರಿನಿಂದ ಕೆಳಗೆ ಇಳಿದು ಕೋತಿಯನ್ನು ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಬಳಿಕ ಚೇತರಿಸಿಕೊಂಡ ಕೋತಿಯನ್ನು ತಮ್ಮ ಗೆಳೆಯರೊಬ್ಬರ ಮನೆಯಲ್ಲಿ ಪೋಷಣೆ ಮಾಡುತ್ತಿದ್ದಾರೆ. ಯುವಕರು ಮನೆಯಲ್ಲಿ ಕೋತಿಗೆ ಪೋಷಣೆ ಮಾಡುವ ಜೊತೆಗೆ ಕೋತಿಯ ಗಾಯ ಬೇಗ ವಾಸಿಯಾಗಲು ಔಷಧಿಯನ್ನು ಹಚ್ಚುತ್ತಿದ್ದಾರೆ. ಯುವಕರ ಮಾನವೀಯತೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಿಮ್ಮ ಸಲಹೆ ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂರ್ಪಕಿಸಿ: contact@firstnews.tv