ಯುವ ಪ್ರತಿಭೆಗೆ ವೇದಿಕೆಯಾಯಿತು ಯುವ ಯಾಮಿನಿ..!

ಬೆಂಗಳೂರು: ರೋಟರಿ ಕ್ಲಬ್​ ಸಹಯೋಗದಲ್ಲಿ ಸಾಂಪ್ರದಾಯಿಕ ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಯುವ ಯಾಮಿನಿ ಕಾರ್ಯಕ್ರಮವನ್ನು ಲ್ಯಾವೆಲ್ಲೇ ರಸ್ತೆಯ ರೋಟರಿ ಹೌಸ್​ ಆಫ್ ಫ್ರೆಂಡ್​ಶಿಪ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಐದು ಗಂಟೆಗಳ ಕಾಲ ಕಾರ್ನಾಟಿಕ್ ಮ್ಯೂಸಿಕ್​ ಹಾಗೂ ಹಿಂದುಸ್ತಾನಿ ಸಂಗೀತವನ್ನ ಆಯೋಜನೆ ಮಾಡಲಾಗಿತ್ತು. ಈ ವೇಳೆ ಹಲವಾರು ಪ್ರತಿಭಾನ್ವಿತ ಮಕ್ಕಳು ಭಾಗವಹಿಸಿ ತಮ್ಮ ಸಂಗೀತ ಸುಧೆಯ ಮೂಲಕ ನೆರೆದಿದ್ದ ಸಭಿಕರನ್ನ ಮಂತ್ರ ಮುಗ್ಧರನ್ನಾಗಿಸಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv