ಕಂಡಕ್ಟರ್​​ ಪ್ರಜ್ಞೆ ತಪ್ಪಿಸಿ ಕಳ್ತನ ಮಾಡ್ತಿದ್ದ ಖದೀಮನಿಗೆ ಧರ್ಮದೇಟು..!

ಹುಬ್ಬಳ್ಳಿ: ಬಸ್ ಕಂಡಕ್ಟರ್ ಪ್ರಜ್ಞೆತಪ್ಪಿಸಿ ಕಳ್ಳತನ ಮಾಡುತ್ತಿದ್ದ ಕಳ್ಳನನ್ನ ಗ್ರಾಮಸ್ಥರು ಹಿಡಿದು, ಮನಬಂದಂತೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಕುಂದಗೋಳ ತಾಲೂಕಿನ ಚಾಕಲಬ್ಬಿ ಗ್ರಾಮದಲ್ಲಿ ನಡೆದಿದೆ.

ಗ್ರಾಮಸ್ಥರೇ ಕಳ್ಳರನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಕುಂದಗೋಳ ಪೊಲೀಸರಿಗೆ ಒಪ್ಪಿಸಿದ್ದಾರೆ. ಕಳೆದ ಹಲವು ದಿನಗಳಿಂದ ಕಂಡಕ್ಟರ್​ಗೆ ಕೈಚಳಕ ತೋರಿಸಿ ಕಳ್ಳರು ಪರಾರಿಯಾಗುತ್ತಿದ್ದರು. ಗ್ರಾಮದ ವಸ್ತಿ ಬಸ್ ನಿರ್ವಾಹಕರನ್ನು ಟಾರ್ಗೆಟ್ ಮಾಡಿ ಅವರ‌ನ್ನ ಆತ್ಮೀಯವಾಗಿ‌ ಮಾತನಾಡಿಸಿ, ಪ್ರಜ್ಞೆ ತಪ್ಪಿಸಿ ಅವರ ಬಳಿ ಇದ್ದ ಹಣವನ್ನೆಲ್ಲ ಕಳ್ಳತನ‌ ಮಾಡಿಕೊಂಡು ಹೋಗುತ್ತಿದ್ದರು. ಇಂತಹ ಹಲವು ಪ್ರಕರಣಗಳು ಕುಂದಗೋಳ ಠಾಣೆಯಲ್ಲಿ ದಾಖಲಾಗಿ, ಗ್ರಾಮೀಣ ಬಸ್ ನಿರ್ವಾಹಕರು ವಸ್ತಿ‌ ಮಾರ್ಗದಲ್ಲಿ  ಡ್ಯೂಟಿ ಮಾಡಲು ಹಿಂದೆಟು ಹಾಕುತ್ತಿದ್ದರು. ಈ ‌ಬಗ್ಗೆ ಗ್ರಾಮಸ್ಥರು‌ ನಿಗಾವಹಿಸಿ ಹುಬ್ಬಳ್ಳಿ ಛಾಕಲಬ್ಬಿ ಸಾರಿಗೆ ಬಸ್ ನಿರ್ವಾಹಕನ ಹಣ ಕಳ್ಳತನ ಮಾಡುವ ವೇಳೆ ರೆಡ್ ಹ್ಯಾಂಡ್ ಆಗಿ ಕಳ್ಳನನ್ನು ಹಿಡಿದು ಥಳಿಸಿ‌ ಪೊಲೀಸರಿಗೆ ಒಪ್ಪಿಸಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv