ರೈಲಿನ ಮೇಲೆ ನಿಂತು, ಸಾಯ್ತೀನೆಂದು ಬೆದರಿಸುತ್ತಿದ್ದ ವ್ಯಕ್ತಿ ಸುಟ್ಟು ಭಸ್ಮ

ಬೆಂಗಳೂರು:  ವ್ಯಕ್ತಿಯೊಬ್ಬ ಸಾಯುತ್ತೇನೆಂದು ಹೆದರಿಸಲು ಹೋಗಿ, ವಿದ್ಯುತ್​ ಶಾಕ್​​ನಿಂದ ಮೃತಪಟ್ಟ ಘಟನೆ ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ಸ್ಟೇಷನ್‌ನಲ್ಲಿ ನಡೆದಿದೆ. ಕಳೆದ ಮೂರು ದಿನಗಳ ಹಿಂದೆ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಾನಸಿಕ ಅಸ್ವಸ್ಥನಾಗಿದ್ದ ವ್ಯಕ್ತಿ ರೈಲಿನ ಮೇಲೆ ನಿಂತು, ಆತ್ಮಹತ್ಯೆ ಬೆದರಿಕೆ ಹಾಕುತ್ತಿದ್ದ. ಏಕಾಏಕಿ ಟ್ರೈನ್ ಮೇಲೇರಿ ನಾನು ಸಾಯ್ತೀನಿ ಅಂತ ಬೆದರಿಕೆಯೊಡ್ಡಿದ್ದ. ಈ ವೇಳೆ ಆತ ಕೈ ಎತ್ತುತ್ತಿದ್ದಂತೆ ಹೈಟೆನ್ಷನ್ ವೈರ್ ಟೆಚ್ ಆಗಿದೆ. ವಿದ್ಯುತ್ ಪ್ರವಹಿಸಿದ ಕಾರಣ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಎಲ್ಲ ದೃಶ್ಯ ಪ್ರತ್ಯಕ್ಷದರ್ಶಿಯೊಬ್ಬರ ಮೊಬೈಲ್​ನಲ್ಲಿ ಸೆರೆಯಾಗಿದೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv