ಪ್ರಚಾರದ ವೇಳೆ ಸಚಿವ ಡಿಸಿ ತಮ್ಮಣ್ಣರನ್ನ ತರಾಟೆಗೆ ತೆಗೆದುಕೊಂಡ ಯುವಕ

ಮಂಡ್ಯ: ಸಚಿವ  ಡಿಸಿ ತಮ್ಮಣ್ಣಗೆ ಗ್ರಾಮದ ಅಭಿವೃದ್ಧಿ, ಕಬ್ಬಿನ ಬಾಕಿ ವಿಚಾರವಾಗಿ ಯುವಕನೊಬ್ಬ ತರಾಟೆಗೆ ತೆಗೆದುಕೊಂಡಿದ್ದಾನೆ.  ಮದ್ದೂರು ತಾಲೂಕಿನ ಬಿದರಹಳ್ಳಿಯಲ್ಲಿ ನಿಖಿಲ್ ಪರ ಪ್ರಚಾರಕ್ಕೆ ತೆರಳಿದ್ದ ವೇಳೆ ಯುವಕ, ಸಚಿವರಿಗೆ ಪ್ರಶ್ನೆ ಮಾಡಿದ್ದು, ಯುವಕನಿಗೆ ಮತ್ತೆ ಸಚಿವರು ಮರು ಪ್ರಶ್ನೆ ಮಾಡಿದ್ದಾರೆ. ಇದೇ ವೇಳೆ ಯುವಕನ ಪ್ರಶ್ನೆಗೆ ಕೋಪಗೊಂಡ ಸಚಿವರು ಹಾಗೂ ಅವರ ಬೆಂಬಲಿಗರು, ಚರಂಡಿ ನಾನು ಮಾಡಿಸಬೇಕಾ? ಪಂಚಾಯಿತಿಯವರು ಮಾಡಿಸಬೇಕು ಎಂದು ಉತ್ತರಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಯುವಕ ಕಬ್ಬಿನ ಹಣ ನಾನು ಕೊಡಬೇಕಾ ಎಂದು ಪ್ರಶ್ನಿಸುತ್ತಾರೆ. ನಿಮ್ಮನ್ನು ಗೆಲ್ಲಿಸಿರುವುದು ಏಕೆ ಎಂದು ಕೇಳಿದ್ದು, ನನ್ನನ್ನ ಗೆಲ್ಲಿಸಿರುವುದು ನಿಮ್ಮ ಮನೆ ತುಂಬಿಸೋಕಾ?,  ಸಕ್ಕರೆ ಕಾರ್ಖಾನೆ ಏನು ನಮ್ಮಪ್ಪನದ ಎಂದು ತಮ್ಮಣ್ಣ ಆಕ್ರೋಶ ವ್ಯಕ್ತಪಡಿಸಿದ್ರು.  ಯುವಕ ಮಾತು ಮುಂದುವರಿಸುತ್ತಿದ್ದಂತೆ ತಮ್ಮಣ್ಣನವರ ಬೆಂಬಲಿಗರ ವಿರೋಧ ವ್ಯಕ್ತಪಡಿಸಿದ್ದು, ವಿರೋಧ ಪ್ರತಿರೋಧದ ನಡುವೆಯೇ ಸಚಿವರು ಸ್ಥಳದಿಂದ ತೆರಳಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv