ತಲವಾರ್​ನಲ್ಲಿ ಬರ್ತ್​ಡೇ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ

ಹುಬ್ಬಳಿ: ಯುವಕನೋರ್ವ ತಲ್ವಾರ್​ನಿಂದ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಶುಭಂ ಬಿಜವಾಡ ಎಂಬ ಯುವಕ ರಸ್ತೆ ಮಧ್ಯದಲ್ಲಿಯೇ ತಲ್ವಾರ್​ನಿಂದ ಕೇಕ್ ಕತ್ತರಿಸುತ್ತಾ, ಹಾಲಿನ ಅಭಿಷೇಕ ಮಾಡಿಕೊಂಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ವಿಚಿತ್ರ ಆಚರಣೆ ವೀಡಿಯೂ ಫೇಸ್​ಬುಕ್​ನಲ್ಲಿ ವೈರಲ್ ಆಗಿದೆ.

ಒಂದು ವಾರದ ಹಿಂದೆಯೂ..
ಒಂದು ವಾರದ ಹಿಂದೆ ಇರ್ಶಾದ್ ಎಂಬಾತ ಕೂಡ ತಲ್ವಾರ್ ನಿಂದ ಕೇಕ್ ಕತ್ತರಿಸಿ, ತಲ್ವಾರ್ ನಿಂದಲೇ ಕೇಕ್ ತಿನ್ನಿಸಿ ಹುಟ್ಟುಹಬ್ಬ ಆಚರಿಸಿಕೊಂಡು ಸುದ್ದಿಯಾಗಿದ್ದ. ಅದರ ಬೆನ್ನಲ್ಲೇ, ಈಗ ಮತ್ತೊಬ್ಬ ಯುವಕ ತಲ್ವಾರ್ ನಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾನೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv