ಜಾತಿ ಜಾತಿ ಎಂದು ಯಾಕೆ ಸಾಯ್ತೀರಾ, ನೋಂದ ಪ್ರೇಮಿಯ ಕೊನೆಮಾತು..!

ತುಮಕೂರು: ಪ್ರೀತಿಗೆ ಜಾತಿ ಅಡ್ಡಿಯಾಗಿ, ಪ್ರೀತಿಸಿದ ಹುಡುಗಿ ಸಿಗಲಿಲ್ಲವೆಂದು ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ನಗರದ ಕ್ಯಾತ್ಸಂದ್ರದಲ್ಲಿ ನಡೆದಿದೆ. ಫೆಸ್​​ಬುಕ್​​ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೋ ಅಪ್​ಲೋಡ್​ ಮಾಡಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ರಾಘವೇಂದ್ರ(26) ಆತ್ಮಹತ್ಯೆ ಮಾಡಿಕೊಂಡ ಯುವಕ. ತುರುವೇಕೆರೆ ಮೂಲದ ಯುವತಿಯನ್ನು ಕಳೆದ ಐದು ವರ್ಷಗಳಿಂದ ರಾಘವೇಂದ್ರ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಇಬ್ಬರದು ಜಾತಿ ಬೇರೆ ಆಗಿದ್ದರಿಂದಾಗಿ ಯುವತಿಯ ತಂದೆ ಮದುವೆಗೆ ವಿರೋಧ ಮಾಡಿದ್ದರು. ಪ್ರೀತಿಸಿದ ಹುಡುಗಿಯನ್ನು ಮದುವೆ ಆಗಲು ಆಗಲಿಲ್ಲ ಎಂದು ಮನನೊಂದ ಯುವಕ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ.
ಇನ್ನು ಆತ್ಮಹತ್ಯೆಗೂ ಮುನ್ನ ಯುವಕ ಫೇಸ್​​ಬುಕ್​​ ವಿಡಿಯೋದಲ್ಲಿ ಜಾತಿ ಜಾತಿ ಎಂದು ಯಾಕೆ ಸಾಯ್ತೀರಾ..? ಸತ್ತ ಮೇಲೆ ಜಾತಿ ಹೊತ್ಕೊಂಡ್​​ ಹೋಗ್ತಿರಾ..? ನಾನಿನ್ನು ನಿನ್ನ ಮಗಳ ತಂಟೆಗೆ ಬರಲ್ಲ. ಅವಳು ಚೆನ್ನಾಗಿರಲಿ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ. ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ನಿಮ್ಮ ಸಲಹೆ ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂರ್ಪಕಿಸಿ:contact@firstnews.tv