ನಿಮ್ಮ ಕಣ್ಣುಗಳೇ ಹೇಳುತ್ತವೆ ವ್ಯಕ್ತಿತ್ವದ ಭವಿಷ್ಯ.. ಹೇಗೆ ಗೊತ್ತಾ..?

ಕಣ್ಣುಗಳು ಎಲ್ಲಾ ಭಾವನೆಗಳನ್ನ ಅಭಿವ್ಯಕ್ತಗೊಳಿಸುತ್ತೆ. ಪ್ರೀತಿ, ಮಮತೆ, ದುಃಖ ಎಲ್ಲಾ ರೀತಿಯ ಭಾವನೆಗಳು ಕೆಲವೊಮ್ಮೆ ಆನಂದ ಭಾಷ್ಪವಾಗಿ ಹೊರಬಂದ್ರೆ, ಕೆಲವೊಮ್ಮೆ ಕಣ್ಣೀರಾಗಿ ಹೊರ ಹೊಮ್ಮುತ್ತೆ. ಒಟ್ನಲ್ಲಿ ಈ ನಯನಗಳು ಸುಂದರ ಜೀವನದ ಅಮೂಲ್ಯವಾದ ಭಾಗಗಳೆಂದರೆ ತಪ್ಪಾಗಲಾರದು. ಕಣ್ಣುಗಳು ಹೇಗೆ ಸಮಾಜವನ್ನು ದೃಶ್ಯಗಳ ಮೂಲಕ ನಮಗೆ ಪ್ರಸ್ತುತಪಡಿಸುತ್ತೋ ಅದೇ ರೀತಿ ಕಣ್ಣಿನ ಗುಡ್ಡೆಗಳು ನಮ್ಮ ವ್ಯಕ್ತಿತ್ವವನ್ನು ಹೇಳುತ್ತವೆ.

1. ಬ್ಲಾಕ್​ ಐ ಬಾಲ್ಸ್​ :
ಕಪ್ಪು ಅಥವಾ ಗಾಡಾ ಕಂದು ಬಣ್ಣದ ಕಣ್ಣುಗುಡ್ಡೆ ಉಳ್ಳವರಲ್ಲಿ ನಾಯಕತ್ವದ ಗುಣ, ಉತ್ತಮ ಸಂಬಂಧ ಮತ್ತು ಒಮ್ಮತ ಅಭಿಪ್ರಾಯದ ಗುಣಗಳು ಹೆಚ್ಚಾಗಿ ಕಂಡುಬರುತ್ತದೆ. ಅದಲ್ಲದೇ ಕಪ್ಪು ಕಣ್ಣುಗುಡ್ಡೆ ಉಳ್ಳವರು ಗುರಿ ಸಾಧಕರು ಮತ್ತು ಉತ್ತಮ ಕ್ರೀಡಾಪಟುವಾಗಿರುತ್ತಾರೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

2. ಬ್ಲೂ ಐ ಬಾಲ್ಸ್​ :
ಬ್ಲೂ ಐ ಬಾಲ್ಸ್​ ಹೊಂದಿದವರು ದೈಹಿಕ ಹಾಗೂ ಮಾನಸಿಕವಾಗಿ ಬಲಿಷ್ಠರಾಗಿರುತ್ತಾರೆ. ನಿಮ್ಮಿಂದ ನಕರಾತ್ಮಕ ಕಿರಣಗಳು ಹೆಚ್ಚು ಬರುವುದರಿಂದಾಗಿ ಅಪರಿಚಿತರು ನಿಮ್ಮ ಬಗ್ಗೆ ತಪ್ಪು ಅಭಿಪ್ರಾಯಗಳನ್ನ ಹೊಂದುವ ಸಾಧ್ಯತೆಗಳಿವೆ. ಜರ್ಮನ್​ ಡೈಲಿ ಮೇಲ್​ವೊಂದರ ಪ್ರಕಾರ ನೀಲಿ ಕಣ್ಣುಗುಡ್ಡೆ ಉಳ್ಳ ವ್ಯಕ್ತಿಗಳು ಹೊಸ ಅವಿಷ್ಕಾರ ಮಾಡುವಲ್ಲಿ ಹೆಚ್ಚು ಆಸಕ್ತರಾಗಿರುತ್ತಾರೆ. ಆದ್ರೆ ಸಾಮಾಜಿಕ ಜೀವನದಿಂದ ಆದಷ್ಟು ದೂರವಿರಲು ಇಚ್ಛಿಸುತ್ತಾರೆ. ಅದಲ್ಲದೇ ಇದರಿಂದ ಆಗ್ಸಿಟಿ, ಕಿನ್ನತೆಯಂತಹ ತೊಂದರೆಗಳು ದೂರವಿರುತ್ತೆ ಎಂದು ಅಧ್ಯಯನದ ಮೂಲಕ ತಿಳಿದುಬಂದಿದೆ.

3. ಗ್ರೇ ಐ ಬಾಲ್ಸ್ :
ಗ್ರೇ ಐ ಬಾಲ್ಸ್​ ಬಹಳ ಕಡಿಮೆ ಜನರಲ್ಲಿ ಕಾಣಸಿಗುತ್ತೆ. ಬೂದಿ ಬಣ್ಣದ ಕಣ್ಣುಗುಡ್ಡೆಗಳ್ಳುಳ ವ್ಯಕ್ತಿಗಳು ಸಾಮಾನ್ಯವಾಗಿ 2 ರೀತಿಯ ಮುಖಗಳನ್ನು ಹೊಂದಿರುತ್ತಾರೆ. ಅವರು ಬೇರೆ ಬೇರೆ ವ್ಯಕ್ತಿಗಳ ಜೊತೆ ವಿಭಿನ್ನವಾಗಿ ಇರುತ್ತಾರೆ. ಈ ರೀತಿ ವ್ಯಕ್ತಿತ್ವ ನಿಮ್ಮ ಜೀವನಕ್ಕೆ ವರವೂ ಆಗಬಹುದು, ಶಾಪವೂ ಆಗಬಹುದು ಎಂದು ಟೆಕ್​ ಮ್ಯೂಸಿಯಂ ಇನೋವೇಷನ್​ ತಿಳಿಸಿದೆ.

4. ಹ್ಯಾಝೆಲ್ ಐ ಬಾಲ್ಸ್​:
ಹ್ಯಾಝೆಲ್ ಐ ಬಾಲ್ಸ್ ಕಂದು ಮತ್ತು ಕಪ್ಪು, ಹಸಿರು ಮಿಶ್ರಿತ ಬಣ್ಣವಾಗಿದೆ. ಹ್ಯಾಝೆಲ್ ಐ ಬಾಲ್ಸ್ ಕಣ್ಣಗುಡ್ಡೆ ಹೊಂದಿದವರು ಕಾನ್ಫಿಟೆಂಡ್​, ಇಂಡಿಪೆಂಡೆಟ್​ ಮತ್ತು ಸ್ಪಾಟೇನಿಯಸ್​ ಆಗಿರುತ್ತಾರೆ ಎಂದು ಐ ಡಾಕ್ಟರ್​ ಗೈಡ್​ ತಿಳಿಸಿದೆ.

5. ಬ್ರೌನ್​ ಐ ಬಾಲ್ಸ್:
ಕಂದು ಕಣ್ಣುಗುಡ್ಡೆಗಳು ಹೊಂದಿದವರು ಹೆಚ್ಚು ವಿಶ್ವಾಸನೀಯ ವ್ಯಕ್ತಿಯಾಗಿರುತ್ತಾರೆ. ಬ್ರೌನ್​ ಐ ಬಾಲ್ಸ್​ವುಳ್ಳ ವ್ಯಕ್ತಿ ತುಂಬಾ ಮೃದು, ನಿಷ್ಠಾವಂತ ಮತ್ತು ಎಲ್ಲಾರಿಗೂ ಗೌರವವನ್ನು ನೀಡುತ್ತಾರೆ. ಕಂದು ಕಣ್ಣುಗುಡ್ಡೆಗಳ್ಳುಳ ವ್ಯಕ್ತಿ ಸಾಮಾನ್ಯರಿಗಿಂತ ಕಡಿಮೆ ನಿದ್ರೆಯನ್ನು ಮಾಡ್ತಾರೆ ಹಾಗೇನೇ ಬೆಳ್ಳಿಗೆ ಬೇಗ ಎದ್ದೇಳಲು ತುಂಬಾನೇ ಕಷ್ಟಪಡುತ್ತಾರೆ ಎಂದು ಕ್ರೋನೋಬಾಯಲಾಜಿ ಇಂಟರ್​ನ್ಯಾಷನಲ್​ ಜನರಲ್​ ತಿಳಿಸಿದೆ.

6. ಗ್ರೀನ್​ ಐ ಬಾಲ್ಸ್ :
ಗ್ರೀನ್​ ಐ ಬಾಲ್ಸ್​ ಕಾಣ ಸಿಗುವುದು ಬಹಳ ವಿರಳ. ಆದ್ರೆ ತಿಳಿ ಹಸಿರು ಬಣ್ಣದ ಕಣ್ಣು ನೋಡಲು ತುಂಬಾ ಆಕರ್ಷಣೀಯವಾಗಿದ್ದು, ನಿಮ್ಮ ಮುಖದ ಸೌಂದರ್ಯವನ್ನು ಇನ್ನು ಹೆಚ್ಚಿಸುತ್ತೆ. ಕ್ರಿಯೆಟಿವ್​, ಒಮ್ಮತ ಅಭಿಪ್ರಾಯ, ಬ್ಯಾಲೆನ್ಸ್​ಡ್​ ಮತ್ತು ಪ್ರಾಬಲ್ಯ ವ್ಯಕ್ತಿಯಾಗಿರುತ್ತಾನೆ ಹಾಗೂ ಒತ್ತಡವಿರುವ ಸಂದರ್ಭದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಾರೆ ಎಂದು ಇಂಪಲ್ಸ್​ ಕಾಪೋರೇಷನ್​ ಅಧ್ಯಯನವೊಂದರಲ್ಲಿ ತಿಳಿಸಿದೆ.