ಕಟ್ಟಡದಿಂದ ಹಾರಿ ಯುವಕ ಸೂಸೈಡ್‌: ಐಟಿಪಿಎಲ್‌ ನೌಕರರಲ್ಲಿ ಆತಂಕ

ಬೆಂಗಳೂರು: ಐಟಿಪಿಎಲ್ ಆವರಣದಲ್ಲಿ ಕಟ್ಟಡದಿಂದ ಹಾರಿ ಯುವಕ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ನಡೆದಿದೆ. 12 ಹಂತದ ಕಟ್ಟಡದ ಮೇಲಿಂದ ಹಾರಿ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮೃತ ಯುವಕ ನ್ಯೂ ಸಿಗ್ಮಾ​ ಎಂಬ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಎನ್ನಲಾಗಿದೆ. 12ನೇ ಪ್ಲೋರ್‌ನ ಕಿಟಕಿಯ ಗ್ಲಾಸ್​ ಒಡೆದು ಯುವಕ ಹಾರಿದ್ದಾನೆ. ತಕ್ಷಣ ಯುವಕನನ್ನ ಆಸ್ಪತ್ರಗೆ ರವಾನಿಸಲು ಸೆಕ್ಯೂರಿಟಿ ಗಾರ್ಡ್‌ಗಳು ಮುಂದಾಗಿದ್ದಾರೆ. ಆದ್ರೆ ಬಿದ್ದ ಸ್ಥಳದಲ್ಲಿಯೇ ಯುವಕ ಮೃತ ಪಟ್ಟಿರೋ ವಿಚಾರ ಗೊತ್ತಾಗಿದೆ. ಇಂದು ಸಂಜೆ ನಾಲ್ಕು ಘಂಟೆಯ ಸಮಯದಲ್ಲಿ ಘಟನೆ ನಡೆದಿದ್ದು, ಕೆಲ ಕಾಲ ಐಟಿಪಿಎಲ್ ಆವರಣದಲ್ಲಿ ನೌಕರರಿಗೆ ಆತಂಕದಿಂದ ಇದಿದ್ದು ಕಂಡು ಬಂತು. ಸ್ಥಳಕ್ಕೆ ವೈಟ್​ಫಿಲ್ಡ್​​ ಪೊಲೀಸರು ಭೇಟಿ ನೀಡಿ ಪರೀಶಿಲನೆ ನಡೆಸಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv