ಸೋತಿರೋ ನೀನು ಸುಮ್ಮನಿರು: ಸುರೇಶ್‌ಗೌಡಗೆ ಚೆನ್ನಿಗಪ್ಪ ಆವಾಜ್‌

ತುಮಕೂರು: ಚುನಾವಣೆ ಮುಗಿದು ಸರ್ಕಾರ ರಚನೆಯಾದರೂ ರಾಜಕಾರಣಿಗಳ ನಡುವಿನ ಸಮರ ನಿಂತಿಲ್ಲ. ಈಗ ತುಮಕೂರಿನ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿಯ ಮಾಜಿ ಶಾಸಕ ಮತ್ತು ಜೆಡಿಎಸ್‌ ನಾಯಕ, ಮಾಜಿ ಸಚಿವರ ನಡುವೆ ವಾಕ್ಸಮರ ಶುರುವಾಗಿದೆ. ಮಾಜಿ ಶಾಸಕ ಸುರೇಶ್‌ಗೌಡ ವಿರುದ್ಧ ಮಾಜಿ ಸಚಿವ ಚೆನ್ನಿಗಪ್ಪ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಅವರು ‘ಸುರೇಶ್‌ ಗೌಡನನ್ನು ಜನರು ಮೆಂಟಲ್ ಎಂದು ಕರೆಯುತ್ತಾರೆ. ಆತ ಮಾಡಿದಷ್ಟು ದೌರ್ಜನ್ಯ ನಾನು ಮಾಡಿಲ್ಲ. ಸುರೇಶ್‌ ಗೌಡ ಯೂನಿವರ್ಸಿಟಿಯಲ್ಲಿ ನಕಲಿ ಅಂಕ ಪಟ್ಟಿ, ನಕಲಿ ಟಿಸಿ ಮಾರಾಟ ಮಾಡಿದ್ದಾನೆ ಎಂದು ಆರೋಪಿಸಿದರು. ಅಲ್ಲದೇ, ಜನರ ಮೇಲೆ ಕೇಸ್‌ ಹಾಕಿಸಿ ಲಂಚ ಪಡೆದಿದ್ದಾನೆ. ಅಧಿಕಾರಿಗಳ ಮೇಲೂ ಹಲ್ಲೆ ನಡೆಸಿದ್ದಾನೆ. ಸೋತಿರೋ ನೀನು ಸುಮ್ಮನಿರು ಎಂದು ಏಕವಚನದಲ್ಲಿಯೇ ಚೆನ್ನಿಗಪ್ಪ ಆವಾಜ್ ಹಾಕಿದ್ದಾರೆ. ಜೆಡಿಎಸ್​ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಮಾಜಿ ಶಾಸಕ ಸುರೇಶ್​ಗೌಡ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಚೆನ್ನಿಗಪ್ಪ ಅವರು ಸುರೇಶ್‌ ಗೌಡಗೆ ತಿರುಗೇಟು ನೀಡಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv