ಸರಿಯಾದ ಲೆಕ್ಕ ಕೊಡದಿದ್ದಕ್ಕೆ ಆಮ್ರಪಾಲಿ ಗ್ರೂಪ್​ ಮೇಲೆ ಸುಪ್ರೀಂ ಗರಂ

ದೆಹಲಿಯ ಆಮ್ರಪಾಲಿ ಗ್ರೂಪ್​ ಹಾಗೂ ಅದರ ಪ್ರವರ್ತಕರನ್ನ ಸುಪ್ರೀಂ ಕೋರ್ಟ್​ ನಿನ್ನೆ ಅತಿದೊಡ್ಡ ಮೋಸಗಾರರು ಅಂತ ಛೀಮಾರಿ ಹಾಕಿದೆ. ಯಾಕಂದ್ರೆ ನಿವೇಷನ ಖರೀದಿದಾರರ ಜೊತೆ ಮಾಡಿಕೊಂಡಿದ್ದ ₹3000 ಕೋಟಿ ವ್ಯವಹಾರದ ಲೆಕ್ಕಾಚಾರವನ್ನು ಕೋರ್ಟ್​ಗೆ ನೀಡುವಲ್ಲಿ ಆಮ್ರ ಪಾಲಿ ಗ್ರೂಪ್​ ವಿಫಲವಾತ್ತು. ದೆಹಲಿಯ ವಿವಿಧ ಪ್ರದೇಶಗಳಲ್ಲಿ ನಿವೇಶನಗಳನ್ನು ಖರೀದಿಸುವ ಆಮ್ರ ಪಾಲಿ ಗ್ರೂಪ್​ , ಈಗಾಗಲೇ 411 ಕೋಟಿ ರೂಪಾಯಿಯ ಬಂಡವಾಳವನ್ನ ಬೇರೆಡೆ ಹೂಡಿಕೆ ಮಾಡಿದ ಪರಿಣಾಮ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಈ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ ದ್ವಿದಸ್ಯ ಪೀಠ, ಆಮ್ರ ಪಾಲಿ ಗ್ರೂಪ್​ ವ್ಯವಹಾರದ ಹಾಗೂ ಫಲಾನುಭವಿಗಳ ಕುರಿತು ಮಾಹಿತಿ ನೀಡುವಲ್ಲಿ ವಿಫಲವಾಗಿದೆ ಅಂತ ಹೇಳಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv