15 ವರ್ಷಗಳಿಂದ ಟ್ರಕ್​​ನಲ್ಲೇ ಇವ್ರ ಬದುಕು.. ಈ ಚಾಲಕಿಯ ಹಿಂದಿದೆ ದುರಂತ ಕಥೆ..!

ಮಹಿಳೆಯರು ಬೈಕ್​, ಆಟೋ ರಿಕ್ಷಾ, ಸರ್ಕಾರಿ ಬಸ್​​ ಚಾಲಕರಾಗಿ ಕಾರ್ಯನಿರ್ವಹಿಸುತ್ತಿರುವುದನ್ನ ನೋಡಿದ್ದೇವೆ ಮತ್ತು ಕೇಳಿದ್ದೇವೆ. ಆದರೆ ಇಲ್ಲೊಬ್ಬ ಮಹಿಳೆ ಟ್ರಕ್​​​​ ಚಾಲಕರಾಗಿ ಕಳೆದ 15 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೌದು, ಭೋಪಾಲ್​​​​ನ 49 ವರ್ಷದ ಯೋಗಿತಾ ರಘುವಂಶಿ ಅನ್ನೋರು ಟ್ರಕ್​​​ ಚಾಲಕರಾಗಿ ದೇಶದ ಮೂಲೆ ಮೂಲೆಯಲ್ಲೂ ಸುತ್ತುತ್ತಿದ್ದಾರೆ.

ಯೋಗಿತಾ, ಟ್ರಕ್​​ ಅನ್ನ 45 ಕಿ.ಮೀ ನಷ್ಟು ವೇಗದಲ್ಲಿ ಚಾಲನೆ ಮಾಡುತ್ತಾರೆ. ಯೋಗಿತಾ, ಇಂಗ್ಲಿಷ್​​​, ಹಿಂದಿ, ಗುಜರಾತಿ, ಮರಾಠಿ, ಮತ್ತು ತೆಲಗು ಭಾಷೆಯನ್ನ ಸುಲಲಿತವಾಗಿ ಮಾತನಾಡುತ್ತಾರೆ. ಇದರಿಂದ ಯೋಗಿತಾಗೆ ದೇಶದ ಮೂಲೆ ಮೂಲೆಗೆ ತೇರಳಲು ತುಂಬಾ ಸಹಾಯಕವಾಗಿದೆ.

ಯೋಗಿತಾ, ಟ್ರಕ್​​ ಚಾಲಕರಾಗಲು ಕಾರಣ, 2003 ರಲ್ಲಿ ಅವರ ಪತಿ ರಾಜ್​​ಬಹದ್ದೂರ್​ ​ರಘುವಂಶಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇನ್ನೂಂದು ದುರಂತವೆಂದರೆ ಪತಿಯ ಶವ ಸಂಸ್ಕಾರಕ್ಕೆ ಬರುತ್ತಿದ್ದ ಅವರ ಸಹೋದರ ಕೂಡಾ ಮೃತಪಟ್ಟಿರಂತೆ. ಇದರಿಂದ ನೋವಿನ ಜೊತೆಗೆ ಬದುಕಿನ ಬಂಡಿಯ ಹೊಣೆ ಇವರ ಮೇಲೆ ಇತ್ತು. ಹೀಗಾಗಿ ತಮ್ಮ ಗಂಡನ ವೃತ್ತಿಯನ್ನ ಇವರು ಮುಂದುವರಿಸಿದ್ದಾರೆ.

ಯೋಗಿತಾ, ವಾಣಿಜ್ಯ ಮತ್ತು ಲಾ ಡಿಗ್ರಿ ಮತ್ತು ಬ್ಯುಟಿಷಿಯನ್​​ನಲ್ಲಿ ಪ್ರಮಾಣ ಪತ್ರ ಪಡೆದಿದ್ದಾರೆ. ಆದರೆ, ಇದರಿಂದ ಬರುವ ಆದಾಯದಲ್ಲಿ ತನ್ನ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಲಾಗಲಿಲ್ಲ. ಹೀಗಾಗಿ ತಾನು ಟ್ರಕ್​ ಓಡಿಸಲು ಆರಂಭಿಸಿದೆ. ನಾನು ಟ್ರಕ್​​ನಲ್ಲೇ ಮಲಗುತ್ತೇನೆ. ಊಟವನ್ನ ಕೂಡ ಅಲ್ಲೇ ತಯಾರಿಸಿಕೊಳ್ಳುತ್ತೇನೆ. ನನಗೆ ಈ ವೃತ್ತಿಯಲ್ಲಿ ಯಾವುದೇ ಬೇದರಿಕೆಗಳಾಗಲಿ, ಭಯವಾಗಲಿ ಇಲ್ಲ. ನನ್ನ ಜೊತೆ ಇರುವ ಇತರೇ ಚಾಲಕರೂ ನನ್ನ ಈ ಕೆಲಸಕ್ಕೆ ಪ್ರೋತ್ಸಾಹಿಸುತ್ತಿದ್ದಾರೆ.

ಯೋಗಿತಾ, ಟ್ರಕ್ ಚಾಲಕಿ


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv