ಕಂಪ್ಯೂಟರೀಕೃತ ಸಂಚಾರಿ ಶಾಲೆ ತೆರೆದ ಯೋಗಿ..!

ವಾರಣಾಸಿ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​​ ಅವರು ಮೊಬೈಲ್​ ಬಸ್​​ ಉದ್ಘಾಟಿಸಿದ್ದಾರೆ. ಇದು ಅಂತಿಂಥಾ ಬಸ್ಸಲ್ಲ. ಇದರಲ್ಲಿ ಕಂಪ್ಯೂಟರ್​ ಕ್ಲಾಸ್​​ ರೂಂ ಇದೆ. ಅಂದ್ರೆ ಇದೊಂದು ಸಂಚಾರಿ ಪಾಠಶಾಲೆಯಾಗಿದ್ದು, ವಾರಣಾಸಿ ಜಿಲ್ಲೆಯ ಗ್ರಾಮೀಣ ಭಾಗಗಳೂ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿರುವ ಮಕ್ಕಳಿಗೆ ಶೈಕ್ಷಣಿಕ ಕಾರ್ಯಕ್ರಮಗಳನ್ನು ತಲುಪಿಸುವುದು ಇದರ ಉದ್ದೇಶವಾಗಿದೆ.

ಡಿಜಿಟಲ್​​ ಕ್ಲಾಸ್​​ ರೂಂ: ಇದು ಸುಸಜ್ಜಿತ, ಸಂಪೂರ್ಣವಾಗಿ ಅಂತರ್ಜಾಲ ಆಧರಿತ ಡಿಜಿಟಲ್​​ ಕ್ಲಾಸ್​​ ರೂಂ ಆಗಿದೆ. ಮೊಬೈಲ್​ ಸಾಧನಗಳು, 3 ಡಿ ಪ್ರಿಂಟರ್​​, ಡಿಜಿಟಲ್ ಬ್ಲ್ಯಾಕ್​​ಬೋರ್ಡ್​​ ಮತ್ತು ಕಂಪ್ಯೂಟರ್​​ ಕಾರ್ಯಸ್ಥಾನಗಳು ಈ ಸಂಚಾರಿ ಕ್ಲಾಸ್​​ ರೂಮ್​​ಗಳಲ್ಲಿ ಕಂಡುಬರುತ್ತದೆ. ಈ ಸಂಚಾರಿ ಕ್ಲಾಸ್​​ ರೂಮ್​​ಗಳು ಪ್ರಧಾನಿ ನರೇಂದ್ರ ಮೋದಿ ಅವ್ರ ಡಿಜಿಟಲ್​ ಇಂಡಿಯಾ ಯೋಜನೆಯನ್ನು ಸಾಕಾರಗೊಳಿಸುವಂತಿದೆ ಎಂದು ಡಿಜಿಟಲ್​​ ಕ್ಲಾಸ್​​ ರೂಂ ಉದ್ಘಾಟನೆ ಮಾಡಿದ ಸಿಎಂ ಯೋಗಿ ಆದಿತ್ಯನಾಥ್ ಅಭಿಪ್ರಾಯಪಟ್ಟಿದ್ದಾರೆ.