ಕುರಿ, ನಾಯಿ, ಬೆಕ್ಕುಗಳ ಜೊತೆ ಆಯ್ತು.. ಈಗ ಯೋಗ ವಿತ್​​ ಲೆಮುರ್ಸ್​..!

ಯೋಗಕ್ಕಿಂತ ಮದ್ದು ಇನ್ನೊಂದಿಲ್ಲ. ಹೀಗಾಗಿ ಯೋಗದ ಶಕ್ತಿ, ಯೋಗದ ಮಹತ್ವ, ದಿನೇದಿನೇ ವ್ಯಾಪಿಸುತ್ತಿದೆ. ಇಷ್ಟುದಿನ ಕುರಿ, ನಾಯಿ, ಬೆಕ್ಕು ಸೇರಿದಂತೆ ವಿವಿಧ ಸಾಕು ಪ್ರಾಣಿಗಳ ಜೊತೆ ಯೋಗ ಮಾಡೋದನ್ನ ನೋಡಿದ್ವಿ. ಇದೀಗ ಮತ್ತೊಂದು ಯೋಗ ಟ್ರೆಂಡ್​ ಶುರುವಾಗಿದೆ.. ಅದುವೇ ‘ಲೆಮೋಗ’. ಹೌದು ಈ ಹೊಸ ಯೋಗ ಸೋಶಿಯಲ್ ಮೀಡಿಯಾದಲ್ಲಿ ಹಲ್​ಚೆಲ್​ ಎಬ್ಬಿಸಿದೆ. ಲೆಮೋಗ ಅಂದ್ರೆ ಲೆಮೋರ್ಸ್​ಗಳ ಜೊತೆ ಯೋಗ ಮಾಡೋದಾಗಿದೆ. ಬ್ರಿಟನ್​​ನ ಲೇಕ್​​ ಜಿಲ್ಲೆಯ ಐಶಾರಾಮಿ ಹೋಟೆಲ್​ವೊಂದು ಬಾಡಿ ಫಿಟ್​ನೆಸ್​​ಗೆ ಅಂತಾ ಬರುವ ಅತಿಥಿಗಳಿಗೆ ಈ ಹೊಸ ಐಡಿಯಾ ಪರಿಚಯ ಮಾಡಿಕೊಡುತ್ತಿದೆ. ‘Meet the Wildlife’ ಅನ್ನೋ ಹೆಸರಿನಡಿ ಲೆಮುರ್ಸ್​ಗಳ ಜೊತೆ ಯೋಗವನ್ನ ಪರಿಚಯಿಸಿದೆ. ಲೇಜ್ ಜಿಲ್ಲೆಯಲ್ಲಿ ಬರುವ ಕುಂಬ್ರಿಯಾ ವೈಲ್ಡ್​ಲೈಫ್​ ಪಾರ್ಕ್​ನಲ್ಲಿ ಲೆಮೂರ್ಸ್​ಗಳ ಜೊತೆ ಯೋಗ ಹೇಳಿಕೊಡಲಾಗುತ್ತಿದೆ.