ಕಣ್ಣು ನೋವಿಗೆ ಇಲ್ಲಿದೆ ಸಿಂಪಲ್​ ಪರಿಹಾರ

ಕೆಲವೊಮ್ಮೆ ನಮ್ಮ ದಿನದ ಬಹುತೇಕ ಭಾಗವನ್ನ ಕಂಪ್ಯೂಟರ್ ಮುಂದೆಯೇ ಕಳೆಯುತ್ತೇವೆ. ಕೆಲಸದ ಜೊತೆ ಯೂಟ್ಯೂಬ್ ವೀಡಿಯೋಗಳನ್ನ ಕೂಡಾ ನೋಡುತ್ತಿರುತ್ತೇವೆ. ಹೆಚ್ಚಿನ ಸಮಯ ಕಂಪ್ಯೂಟರ್​ ಮುಂದೆ ಕಳೆಯೋದ್ರಿಂದ ಕಣ್ಣಿಗೆ ತುಂಬಾ ಸ್ಟ್ರೆನ್​ ಆಗಬಹುದು. ಇಂತದ ಸಮಯದಲ್ಲಿ ನಿಮ್ಮ ಕಣ್ಣುಗಳಲ್ಲಿ ಉರಿ, ನೋವು, ತಲೆನೋವಿನಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಕೆಲವೊಂದು ವ್ಯಾಯಾಮಳನ್ನ ಮಾಡೋದ್ರಿಂದ ಭವಿಷ್ಯದಲ್ಲಿ ಕಣ್ಣಿಗೆ ಯಾವುದೇ ಸಮಸ್ಯೆ ಬಾರದಂತೆ ಎಚ್ಚರ ವಹಿಸಬಹುದು.

1. ಕಣ್ಣು ಮಿಟುಕಿಸುವುದು.
ನಿಮ್ಮ ಕಣ್ಣುಗಳನ್ನು ಕೊಂಚ ಸಗಲವಾಗಿ ತೆಗೆದು, 10 ಬಾರಿ ಮಿಟುಕಿಸಿ. ನಂತರ 20 ಸೆಕೆಂಡುಗಳ ಕಾಲ ಕಣ್ಣುಗಳನ್ನು ಮುಚ್ಚಿ ಹೀಗೆ ಈ ವ್ಯಾಯಾಮವನ್ನು ನಾಲ್ಕು ಬಾರಿ ಪುನರಾವರ್ತಿಸಿ. ಒಂದು ನಿಮಿಷದಲ್ಲಿ ಸುಮಾರು 25 ಬಾರಿಯಾದರೂ ಕಣ್ಣು ಮಿಟುಕಿಸಬೇಕು. ವಿಶೇಷವಾಗಿ ನಾವು ನಮ್ಮ ಕಂಪ್ಯೂಟರ್ ಅಥವಾ ಸ್ಮಾಟ್​ಪೋನ್​ನಲ್ಲಿ ಹೆಚ್ಚು ಕಾಲ ಕಳೆಯುವಾಗ ಈ ವ್ಯಾಯಾಮ ಸಹಾಯಕ್ಕೆ ಬರುತ್ತದೆ. ಈ ರೋತಿ ಮಾಡುವುದರಿಂದ ಕಣ್ಣಿನ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ.

2. ಪಾಮಿಂಗ್  ನೀವು ಯೋಗಾಸನ ತರಬೇತಿ ಪಡೆದಿದ್ದರೆ ನಿಮಗೆ ಇದು ತಿಳಿದಿರುತ್ತದೆ. ನಿಮ್ಮ ಕಣ್ಣುಗಳ ಮೇಲೆ ನಿಧಾನವಾಗಿ ಮಸಾಜ್​ ಮಾಡಿ, ಕೈಯಿಂದ ಒಂದೆರೆಡು ನಿಮಿಷಗಳ ಕಾಲ ಮುಚ್ಚಿಕೊಳ್ಳಿ. ಈ ಬೆಚ್ಚಗಿನ ಅನುಭವ ನಿಮ್ಮ ಕಣ್ಣಿಗೆ ರಿಲಾಕ್ಸ್​ ಮಾಡಿ, ನೋವನ್ನ ಕಡಿಮೆ ಮಾಡುತ್ತದೆ.

3. ಕಣ್ಣು ಗುಡ್ಡೆಗಳನ್ನ ನಿಧಾನವಾಗಿ ರೊಟೆಟ್​ ಮಾಡಿ
ಕಣ್ಣಿನ ಗುಡ್ಡೆಗಳನ್ನ ನಿಧಾನವಾಗಿ ರೊಟೆಟ್​ ಮಾಡಿ ಹೀಗೆ ಮಾಡುವಾಗು ಕುತ್ತಿಗೆಯನ್ನ ತಿರುಗಿಸಬಾರದು. ಕೇವಲ ಕಣ್ಣುಗುಡ್ಡೆಗಳನ್ನ ಮಾತ್ರ ಆಚಿಂದಿಚೆ , ಮೇಲೆ ಕೆಳಗೆ ರೋಟೆಟ್​ ಮಾಡಬೇಕು. ಈ ರೀತಿ 20 ಬಾರಿ ಈ ವ್ಯಾಯಾಮಗಳನ್ನು ಪುನರಾವರ್ತಿಸಿ. ಆದಷ್ಟು ಒಂದೆ ಕಡೆ ದೃಷ್ಠಿಯನ್ನ ಕೇಂದ್ರಿಕರಿಸಬೇಡಿ,  ಆಗಾಗ್ಗೆ ಆಚಿಂದಿಚೆ ದೃಷ್ಠಯನ್ನ ಬದಲಿಸುತ್ತಿರಿ.

4. ಸರ್ವಾಂಗಾಸನ:  ಈ ವ್ಯಾಯಾಮ ಕೇವಲ ನಿಮ್ಮ ಕಣ್ಣುಗಳಿಗೆ ಸಹಾಯ ಮಾಡುವುದಿಲ್ಲ, ಜೊತೆಗೆ ನಿಮ್ಮ ಮೆದುಳಿನ ಕಾರ್ಯ ಕ್ಷಮತೆಯನ್ನ ಹೆಚ್ಚಿಸುತ್ತದೆ. ನೆಲದ ಮೇಲೆ ಯೋಗಾ ಮ್ಯಾಟ್​ ಹಾಕಿ ಅಂಗಾತ ಮಲಗಿ. ದೇಹವನ್ನು ನೇರವಾಗಿರಿಸಿ. ಕಾಲುಗಳನ್ನು ನೇರವಾಗಿಸಿ, ಕೈಗಳನ್ನು ಅಂಗೈ ಕೆಳಮುಖವಾಗಿ ಹಗುರವಾಗಿರಿಸಿ. ನಿಧಾನವಾಗಿ ಉಸಿರಾಡಿ. ಮೊಣಕಾಲುಗಳನ್ನು ಎದೆಯ ಮಟ್ಟಕ್ಕೆ ಭಾಗಿಸಿ. ಅಂಗೈಗಳನ್ನು ನೆಲಕ್ಕೆ ಒತ್ತಿ ಸೊಂಟವನ್ನ ನೆಲದಿಂದ ಮೇಲಕ್ಕೆತ್ತಿ. ಕಟಿಭಾಗಕ್ಕೆ ಅಂಗೈಯ ಆಧಾರ ನೀಡಿ ಮೊಣಕಾಲುಗಳನ್ನು ಹಣೆಯತ್ತ ಭಾಗಿಸಿ ಕಾಲುಗಳನ್ನು ನೇರವಾಗಿಸಿ. ನಿಧಾನಕ್ಕೆ ಉಸಿರು ಬಿಡಿ, ಬೆನ್ನು ಮತ್ತು ಕಾಲುಗಳನ್ನು ನೇರವಾಗಿಸಿ. ಕಾಲುಗಳನ್ನು ಮೇಲಕ್ಕೇರಿಸುತ್ತಾ ಮೊಣಕೈಗಳನ್ನು ಭುಜದ ನೇರಕ್ಕೆ ತನ್ನಿ. ಕಾಲಿನ ಹೆಬ್ಬೆರಳುಗಳು, ಕಾಲು ಮತ್ತು ದೇಹವನ್ನು ಸಡಿಲ ಬಿಡಿ. ನಿಮ್ಮ ಕಾಲಿನ ಹೆಬ್ಬೆರಳಿನ ಮೇಲೆ ದೃಷ್ಟಿ ನೆಡಿ. ಸಾಧ್ಯವಾದಷ್ಟು ಹೊತ್ತು ಈ ಭಂಗಿಯಲ್ಲಿದ್ದು ಸಹಜವಾಗಿ ಉಸಿರಾಡಿ. ಈ ರೀತಿ ವ್ಯಾಯಾಮ ಮಾಡುವುದರಿಂದ ಮೆದುಳು, ಕಿವಿ, ಮೂಗುಗಳ ಕಾರ್ಯಕ್ಷಮತೆಯನ್ನ ಹೆಚ್ಚಿಸುತ್ತದೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv