ಮೈಸೂರು ದಸಾರ-2018: ‘ಯೋಗ’ ದಸರಾಗೆ ಚಾಲನೆ

ಮೈಸೂರು: ರಾಜ್ಯದಲ್ಲಿ ನಾಡಹಬ್ಬ ದಸಾರ ಹಬ್ಬದ ಸಂಭ್ರಮ ಮನೆ ಮಾಡಿದೆ. ನಾಡಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕುವೆಂಪುನಗರದಲ್ಲಿ ಹಮ್ಮಿಕೊಂಡಿರುವ ಯೋಗ ದಸರಾಗೆ ಇಂದು ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ ದೇವೇಗೌಡ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಮನುಷ್ಯನ ಮನಸ್ಸು ಹಸನಾಗಿರಲು ಯೋಗ ಅವಶ್ಯಕ, ಯೋಗ ಇಲ್ಲದೆ ಆರೋಗ್ಯ ಇಲ್ಲ. ಆರೋಗ್ಯ ಇಲ್ಲದೆ ಆಯಸ್ಸು ಇಲ್ಲ ಎಂದು ಅಭಿಪ್ರಾಯಪಟ್ಟರು. ಯೋಗ ಜೀವನದಲ್ಲಿ ಎಲ್ಲರಿಗೂ ಅವಶ್ಯಕ ಮತ್ತು ಕಡ್ಡಾಯ, ಈಗಾಗಲೇ ಕಾಲೇಜುಗಳಲ್ಲಿ ಯೋಗ ಶಿಕ್ಷಣ ನೀಡುವಂತೆ  ಸೂಚಿಸಲಾಗಿದೆ ಎಂದು ತಿಳಿಸಿದರು. ಸಮಾರಂಭದಲ್ಲಿ ಶಾಸಕ ರಾಮ್ ದಾಸ್, ಯೋಗ ಗುರುಗಳಾದ ಪ್ರಕಾಶ್ ಗುರೂಜಿ, ಜಿಪಂ ಸದಸ್ಯರಾದ ಚಂದ್ರಿಕ ಸುರೇಶ್, ಉದ್ಬೂರು ಮಹದೇವಸ್ವಾಮಿ ಉಪಸ್ಥಿತರಿದ್ದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv