ವೀರರ ನಾಡಿನಲ್ಲಿ ಯೋಧರಿಗೆ ನಮನ..

ಕೊಡಗು: ‘ಯೋಧ ನಮನ’ ಹೆಸರಿನಲ್ಲಿ ಯುವಕರ ತಂಡ ಸೈನಿಕರಿಗೆ ನಮಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ‘ಯೋಧಾಭಿಮಾನಿ’ ಬಳಗ ವತಿಯಿಂದ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ 17 ಹುತಾತ್ಮ ಯೋಧರ ಕುಟುಂಬದ ಸದಸ್ಯರು, 10 ಮಂದಿ ಗಾಯಾಳು ಸೈನಿಕರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಫೋರಂ ಅಧ್ಯಕ್ಷ ಕರ್ನಲ್ ಕಂಡ್ರತಂಡ ಸುಬ್ಬಯ್ಯ, ವೀರಚಕ್ರ ಪುರಸ್ಕೃತ ಕುಪ್ಪಂಡ ಪಿ. ನಂಜಪ್ಪ ಪಾಲ್ಗೊಂಡಿದ್ದರು. ಇನ್ನು, ‘ಯೋಧಾಭಿಮಾನಿ’ ಬಳಗ ವತಿಯಿಂದ ಮೊದಲ ಬಾರಿಗೆ ಹಮ್ಮಿಕೊಂಡ ಕಾರ್ಯಕ್ರಮದ ಬಗ್ಗೆ ನೆರೆದಿದ್ದವರು ಮೆಚ್ಚುಗೆ ವ್ಯಕ್ತಪಡಿಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv