ಹಳೆ ದೋಸ್ತನ ಜೊತೆ ಯಶ್​ ಹೊಸ ಸಿನಿಮಾಕ್ಕೆ ವರ್ಕ್​ಔಟ್​

ರಾಕಿಂಗ್​ ಸ್ಟಾರ್​ ಯಶ್​ ಸದ್ಯ ಎಲೆಕ್ಷನ್​ನ ಅಬ್ಬರದ ಪ್ರಚಾರ ಮುಗಿಸಿ ಸದ್ಯ ತಮ್ಮ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್​​ ಸೀಕ್ವಲ್​ನ ಶೂಟಿಂಗ್​ನಲ್ಲಿ ಭಾಗಿಯಾಗಲು ತಯಾರಿ ನಡೆಸಿದ್ದಾರೆ. ಎಲೆಕ್ಷನ್​ ಪ್ರಚಾರದ ಬಳಿಕ ಸ್ವಲ್ಪ ರಿಲ್ಯಾಕ್ಸ್​ ಮೂಡ್​ನಲ್ಲಿದ್ದ ಯಶ್​ ಸಧ್ಯ ವರ್ಕ್​​​ ಔಟ್​ ಶುರು ಮಾಡಿದ್ದಾರೆ. ತಮ್ಮ ಬಹುಕಾಲದ ಗೆಳೆಯ ಚೇತನ್​ ಚಂದ್ರ ಜೊತೆಗೆ ಯಶ್​ ವರ್ಕ್​ಔಟ್​ನಲ್ಲಿ ಬ್ಯುಸಿಯಾಗಿದ್ದಾರೆ. ಯಶ್​ ಹಾಗೂ ಚೇತನ್ ಚಂದ್ರ ಒಟ್ಟಾಗಿ ವರ್ಕ್​​ಔಟ್​ ಮಾಡ್ತಾ ಇದ್ದು, ಜಿಮ್​ನಲ್ಲಿ ಕ್ಲಿಕ್ಕಿಸಿಕೊಂಡಿರೋ ಫೋಟೋವನ್ನ ಚೇತನ್ ಚಂದ್ರ ಶೇರ್​ ಮಾಡಿದ್ದಾರೆ.
8 ವರ್ಷದ ಹಿಂದೆ ಒಟ್ಟಾಗಿ ನಟಿಸಿದ್ರು
2011 ರಲ್ಲಿ ತೆರೆಕಂಡಿದ್ದ ರಾಜಧಾನಿ ಸಿನಿಮಾದಲ್ಲಿ ಯಶ್​ ಹಾಗು ಚೇತನ್​ ಚಂದ್ರ ಒಟ್ಟಾಗಿ ನಟಿಸಿದ್ರು, ರಾಜಧಾನಿ ಸಿನಿಮಾದಿಂದಲೇ ಯಶ್​ಗೆ ಒಂದು ಹೊಸ ಮಾಸ್​ ಇಮೇಜ್​ ಬಿಲ್ಡ್​ ಆಗೋಕೆ ಶುರುವಾಗಿತ್ತು. ಈ ಸಿನಿಮಾದ ನಂತ್ರ ಯಶ್​ ಹಾಗು ಚೇತನ್ ಚಂದ್ರ ಒಟ್ಟಾಗಿ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿರ್ಲಿಲ್ಲ. ಯಶ್​ ಥರಹವೇ ಚೇತನ್​ ಕೂಡ ಸೂಪರ್ರಾಗಿ ಬಾಡಿ ಬಿಲ್ಡ್​ ಮಾಡಿದ್ದು, ಸದ್ಯ ಹೊಸ ಸಿನಿಮಾದ ನಿರೀಕ್ಷೆಯಲ್ಲಿದ್ದಾರೆ. ಯಶ್​ ತಮ್ಮ ಹೊಸ ಸಿನಿಮಾಕ್ಕೆ ತಯಾರಿ ನಡೆಸಿದ್ದು, ಹೊಸ ಸಿನಿಮಾದಲ್ಲಿ ಚೇತನ್​ ಇದ್ದರೂ ಅಚ್ಚರಿ ಪಡಬೇಕಿಲ್ಲ..!