ಯಶ್​ಗೆ ಕ್ರೇನ್ ಮೂಲಕ ಬೃಹತ್ ಹೂವಿನ ಮಾಲೆ

ಮಂಡ್ಯ: ಲೋಕಸಭಾ ಚುನಾವಣೆ ಸಮೀಪಿಸುತ್ತಿದಂತೆ ಪ್ರಚಾರ ರಂಗೇರುತ್ತಿದೆ. ಇಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​ ಪರ ನಾಗಮಂಗಲ ಕ್ಷೇತ್ರದ ಕೀಳಘಟ್ಟ ಗ್ರಾಮದಿಂದ ಯಶ್ ಪ್ರಚಾರ ಆರಂಭಿಸಿದರುಈ ವೇಳೆ ಯಶ್​ಗೆ ಕ್ರೇನ್ ಮೂಲಕ ಬೃಹತ್ ಹೂವಿನ ಹಾರ ಹಾಕಲಾಲಾಯಿತು.

ಇನ್ನೊಂದೆಡೆ ಸುಮಲತಾ ಪರ‌ ದರ್ಶನ್ ಶ್ರೀರಂಗಪಟ್ಟಣ ಕ್ಷೇತ್ರದ ರಾಗಿ ಮುದ್ದನಹಳ್ಳಿ, ಯಲಿಯೂರು ಭಾಗದಲ್ಲಿ ರೋಡ್ ಶೋ ನಡೆಸಿ ಪ್ರಚಾರ‌ ನಡೆಸುತ್ತಿದ್ದಾರೆ. ದರ್ಶನ್‌ಗೆ ಕೆಪಿಸಿಸಿ ಸದಸ್ಯ ಸಚ್ಚಿದಾನಂದ ಸಾಥ್ ನೀಡಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv