ಯಾಮಿ ಗೌತಮ್ ಫಿಟ್​ನೆಸ್​ ರಹಸ್ಯ ಏನ್​ ಗೊತ್ತಾ..?!

ಬಾಲಿವುಡ್​ ಬೆಡಗಿ ಯಾಮಿ ಗೌತಮ್ ಅದೆಷ್ಟೋ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಫಿಟ್​ನೆಸ್​ಗೆ ತುಂಬಾ ಪ್ರಾಮುಖ್ಯತೆ ನೀಡುವ ಯಮಿಯ ಮೈಮಾಟ ನೋಡಿದ್ರೆ ವಾವ್ಹ್​ ಎನ್ನಲೇಬೇಕು. ಈ ಫಿಟ್​ನೆಸ್​ ಕಾಪಾಡಿಕೊಳ್ಳಲು ಯಾಮಿ ಸಾಕಷ್ಟು ಶ್ರಮ ವಹಿಸುತ್ತಾರೆ. ದೇಹವು ಇನ್ನಷ್ಟು ಫಿಟ್ ಆಗಿ, ಆಕರ್ಷಕವಾಗಿ ಕಾಣಲು ನಟಿಯರು ಪೋಲ್ ಡಾನ್ಸ್ ಮೊರೆಹೋಗುತ್ತಿದ್ದಾರೆ. ಇದು ಭುಜ ಮತ್ತು ತೋಳುಗಳ ಮಾಂಸಖಂಡಗಳ ಬಲವನ್ನು ಹೆಚ್ಚಿಸುತ್ತದೆ. ಅಲ್ಲದೆ ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆಯಂತೆ.

ಯಾಮಿ ಕೂಡ ಫಿಟ್​ನೆಸ್​ಗಾಗಿ ಪೋಲ್ ಡ್ಯಾನ್ಸಿಂಗ್​ ಮಾಡ್ತಾರೆ. ಇದು ಕಡಿಮೆ ಸಮಯದಲ್ಲಿ ಹೆಚ್ಚು ಕ್ಯಾಲೊರಿಗಳನ್ನು ಬರ್ನ್​ ಮಾಡಲು ಸಹಾಯ ಮಾಡುತ್ತದೆ. ಯಾಕಂದ್ರೆ ಈ ಪೋಲ್​ ಡ್ಯಾನ್ಸಿಂಗ್​ ನಿಮ್ಮ ದೇಹದ ಎಲ್ಲಾ ಸ್ನಾಯುಗಳನ್ನು ವ್ಯಾಯಾಮದಲ್ಲಿ ತೊಡಗಿಸುತ್ತದೆ. ಅಷ್ಟೇ ಅಲ್ಲ, ಪೋಲ್​ ಡ್ಯಾನ್ಸಿಂಗ್​ ಹೃದಯನಾಳಕ್ಕೆ ಹೆಚ್ಚಿನ ವ್ಯಾಯಾಮವನ್ನ ನೀಡುವ ಮೂಲಕ ಸ್ನಾಯುಗಳನ್ನು ಬಲಪಡಿಸಲು ಕೂಡಾ ಸಹಾಯ ಮಾಡುತ್ತದೆ. ಹಾಗೇ ಪೋಲ್​ ಡ್ಯಾನ್ಸಿಂಗ್​ ಸ್ಟ್ರೆಸ್​ ಬಸ್ಟರ್​ ಆಗಿ ಕೂಡಾ ಕೆಲಸ ಮಾಡುತ್ತೆ.

ಪೋಲ್​ ಡ್ಯಾನ್ಸಿಂಗ್​ ಅಷ್ಟೇ ಅಲ್ಲ. ಇತರೆ ವ್ಯಾಯಾಮಗಳ ಬಗ್ಗೆಯೂ ಯಾಮಿ ಬಹಳ ಗಮನ ಹರಿಸುತ್ತಾರೆ. ನಿತ್ಯ ವ್ಯಾಯಾಮಗಳನ್ನ ಮಾಡುವುದರಿಂದ ಮಸಲ್​ ಬಿಲ್ದಿಂಗ್​, ತೂಕ ಕಳೆದುಕೊಳ್ಳುವುದು, ದೇಹವನ್ನು toning ಮಾಡಲು ಸಹಾಯವಾಗುತ್ತದೆ. ಇನ್ನು ಯಾಮಿ ಕ್ಲಾಸಿಕ್ ಬೈಸೆಪ್​ ಕರ್ಲ್ಸ್ ಅನ್ನ ಹೆಚ್ಚಾಗಿ ಮಾಡುತ್ತಾರೆ. ಈ ವ್ಯಾಯಾಮ ಹೆಚ್ಚು ಕ್ರಿಯಾತ್ಮಕವಾಗಿದ್ದು, ತೋಳನ್ನು ಹೆಚ್ಚು ಫ್ಲೆಕ್ಸಿಬಲ್​ ಮಾಡುತ್ತದೆ.

ಯಾಮಿ ತಮ್ಮ ಡಯಟ್​ ಕೂಡಾ ಅಷ್ಟೇ ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಡ್ರೈಫ್ರೂಟ್ಸ್​, ತಾಜಾ ಹಣ್ಣು ಮತ್ತು ನೀರನ್ನ ಹೆಚ್ಚು ಸೇವಿಸುತ್ತಾರೆ. ನಟ್ಸ್​ನಲ್ಲಿರುವ ಅಗತ್ಯವಾದ ಕೊಬ್ಬಿನ ಆಮ್ಲಗಳು ಮತ್ತು ಪ್ರೋಟೀನ್​ಗಳು ನಿಮ್ಮ ಆಹಾರ ಪದ್ಧತಿಯನ್ನ ಸಮತೋಲನದಲ್ಲಿಡುತ್ತದೆ. ತಾಜಾ ಮತ್ತು ಸೀಜನಲ್​ ಹಣ್ಣುಗಳನ್ನು ತಿನ್ನುವುದು ನಿಮ್ಮ ಕರುಳಿನ ಆರೋಗ್ಯಕ್ಕೆ ಅನುಕೂಲಕರ ಎನ್ನುತ್ತಾರೆ ಯಾಮಿ. ಒಂದು ದಿನದಲ್ಲಿ ಎಷ್ಟು ಸಾಧ್ಯವೋ ಅಷ್ಟು ಸೀಜನಲ್ ಹಣ್ಣುಗಳನ್ನು ಯಾಮಿ ಸೇವಿಸುತ್ತಾರಂತೆ. ಹೆಚ್ಚು ನೀರು ಸೇವಿಸುವುದು ಯಾಮಿ ಅವರ ಮತ್ತೊಂದು ಅಭ್ಯಾಸ. ಹೆಚ್ಚು ನೀರಿನ ಸೇವನೆ ನಿಮ್ಮ ದೇಹವನ್ನು ಡಿಹೈಡ್ರೇಟ್​ ಆಗದಂತೆ ನೋಡಿಕೊಳ್ಳುತ್ತದೆ ಮತ್ತು ತೂಕ ಕಳೆದುಕೊಳ್ಳುವಲ್ಲಿ ಬಹಳ ಸಹಕಾರಿ.

View this post on Instagram

#fitness #hustle #toneitup #hellyes

A post shared by Yami Gautam (@yamigautam) on