‘ಯಜಮಾನ’ ಚಿತ್ರದ ನಿಂತ ನೋಡು ವಿಡಿಯೋ ಸಾಂಗ್ ರಿಲೀಸ್..!

‘ಯಜಮಾನ’..ಚಾಲೆಂಜಿಂಗ್ ಸ್ಟಾರ್​ ದರ್ಶನ್ ನಟನೆಯ ಬ್ಲಾಕ್ ಬಾಸ್ಟರ್ ಸಿನಿಮಾ. ಚಿತ್ರ ಈಗಾಗಲೇ ವಿಶ್ವದಾದ್ಯಂತ ತೆರೆಕಂಡು ಶತದಿನದತ್ತ ಮುನ್ನುಗ್ಗುತ್ತಿದೆ. ಚಿತ್ರದ ಪ್ರತಿಯೊಂದು ಹಾಡುಗಳು ರಿಲೀಸ್​ಗೂ ಮುನ್ನವೇ ಟ್ರೆಂಡಿಂಗ್​ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡಿದ್ದವು. ಅದ್ರಲ್ಲೂ ‘ನಿಂತ ನೋಡು ಯಜಮಾನ’ ಅನ್ನೋ ಟೈಟಲ್​ ಸಾಂಗ್ ಅಭಿಮಾನಿಗಳ ಹೃದಯ ಗೆದ್ದಿತ್ತು. ಅದ್ರ ವಿಡಿಯೋ ಸಾಂಗ್ ಇಂದು ರಿಲೀಸ್ ಆಗಿದೆ.

‘ಮೇಕ್​ ಇನ್ ಇಂಡಿಯಾ’ ಕನಸಿನ ಸಿನಿಮಾ..!
ಇದೊಂದು ರೈತ ಪರ ಕಾಳಜಿಯುಳ್ಳ ಸಿನಿಮಾವಾಗಿದ್ದು. ದೇಶಕ್ಕೆ ರೈತನೇ ಬೆನ್ನೆಲುಬು, ರೈತರ ನಡುವೆ ಮೇಲು ಕೀಳು ಅನ್ನೋ ಭಾವನೆಯಿಲ್ಲ. ಅವನು ಬೆಳೆದ ಪ್ರತಿಯೊಂದು ಬೆಳೆಗೂ ಬೆಂಬಲ ಬೆಲೆ ಸಿಗಬೇಕು ಅನ್ನೋ ಸಾಮಾಜಿಕ ಸಂದೇಶವನ್ನು ಹೊಂದಿತ್ತು. ಜೊತೆಗೆ ರೈತರ ಸಮಸ್ಯೆಗಳನ್ನ ಬಗೆಹರಿಸಲು ವ್ಯಕ್ತಿಯೊಬ್ಬ ಹೋರಾಡಿ ಹೇಗೆ ಗೆಲ್ಲುತ್ತಾನೆ ಅನ್ನೋ ರೋಚಕ ಕತೆಯನ್ನು ಹೊಂದಿತ್ತು. ಮೇಕ್ ಇನ್ ಇಂಡಿಯಾ ಕನಸನ್ನು ಹೊತ್ತು ತಂದಿದ್ದ ಸಿನಿಮಾವಾಗಿ ಭಾರೀ ಜನಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಅದೇ ಕನಸನ್ನು ಹೊತ್ತಿರೋ ಟೈಟಲ್ ಟ್ರ್ಯಾಕ್​ನ ವಿಡಿಯೋ ಸಾಂಗ್​ ರಿಲೀಸ್ ಆಗಿದೆ. ಹರಿಕೃಷ್ಣ ಮ್ಯೂಸಿಕ್ ಕಂಪೋಸ್ ಮಾಡಿರೋ ಈ ಹಾಡಿಗೆ ಸಂತೋಷ್ ಆನಂದ್ ರಾಮ್ ಲಿರಿಕ್ಸ್ ಬರೆದಿದ್ದು ವಿಜಯ್ ಪ್ರಕಾಶ್ ಕಂಠದಲ್ಲಿ ಅದ್ಭುತವಾಗಿ ಮೂಡಿಬಂದಿದೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv