ಮೊದಲ ಬಾರಿಗೆ ‌ಪತ್ನಿ ಜೊತೆ ಮತ ಚಲಾಯಿಸಿದ ಯದುವೀರ್ ಒಡೆಯರ್

ಮೈಸೂರು: ರಾಜವಂಶಸ್ಥ ಯದುವೀರ್ ಒಡೆಯರ್ ಅವರು ಮೊದಲ ಬಾರಿಗೆ ತಮ್ಮ ‌ಪತ್ನಿ ತ್ರಿಷಿಕಾದೇವಿ ಒಡೆಯರ್ ಜೊತೆ ಬಂದು ಚಲಾಯಿಸಿದ್ದಾರೆ. ಕೃಷ್ಣರಾಜ ಕ್ಷೇತ್ರದ ಮತಗಟ್ಟೆ 179ರಲ್ಲಿ ಮತ  ಮೈಸೂರು ರಾಜವಂಶಸ್ಥರು ಮತ ಚಲಾಯಿಸಿದರು.

ಮತದಾನ ಚಲಾಯಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಯದುವೀರ್ ಒಡೆಯರ್,  ಮೈಸೂರಿನಲ್ಲಿ ಪ್ರಜಾಪ್ರತಿನಿಧಿ ವ್ಯವಸ್ಥೆಯನ್ನು ಪ್ರಾರಂಭ ಮಾಡಿದ್ದು ರಾಜವಂಶಸ್ಥರು. ಜಯ ಚಾಮರಾಜೇಂದ್ರ ಒಡೆಯರ್ ಅಂದು ಪ್ರಜಾಪ್ರಭುತ್ವದ ಬೀಜ ಹಾಕಿದ್ದರು. ಮೈಸೂರಿನಿಂದಲೇ ಪ್ರಾರಂಭವಾಗಿದ್ದು‌ ಮೊದಲು. ದೇಶದ ಅಭಿವೃದ್ಧಿ ದೃಷ್ಟಿಯಿಂದ  ಎಲ್ಲರೂ ಮತದಾನ ಮಾಡಬೇಕು ಎಂದು ಹೇಳಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv