ನಾಡಿನ ಜನತೆಗೆ ನವರಾತ್ರಿ ಶುಭಾಶಯ ತಿಳಿಸಿದ ಯದುವೀರ್

ಮೈಸೂರು: ಇಂದಿನಿಂದ ದಸರಾ ಹಬ್ಬಕ್ಕೆ ವಿದ್ಯುಕ್ತ ಚಾಲನೆ ದೊರೆತಿದೆ. ಇಂದಿನಿಂದ ಮೈಸೂರಿನಲ್ಲಿ ಒಂಬತ್ತು ದಿನಗಳ ಕಾಲ ನವರಾತ್ರಿ ಉತ್ಸವ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ನಾಡಿನ ಸಮಸ್ತ ಜನತೆಗೆ ಯದುವೀರ್ ದತ್ತ ಚಾಮರಾಜ ಒಡೆಯರ್ ಶುಭಾಶಯ ತಿಳಿಸಿದ್ದಾರೆ.

‘ನಾಡಿನ ಸಮಸ್ತ ಜನತೆಗೆ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು. ಜಗನ್ಮಾತೆಯಾದ ಶ್ರೀ ಚಾಮುಂಡೇಶ್ವರಿ ದೇವಿಯು ತಮ್ಮೆಲ್ಲರಿಗೆ ಉತ್ತಮ ಆರೋಗ್ಯ, ಐಶ್ವರ್ಯ ಹಾಗು ಎಲ್ಲ ರೀತಿಯಲ್ಲೂ ವಿಜಯಶಾಲಿಗಳನ್ನಾಗಿ ಮಾಡಲಿ ಎಂದು ಪ್ರಾರ್ಥಿಸುತ್ತೇವೆ’ ಅಂತಾ ತಮ್ಮ ಇನ್ಸ್​ಟಾಗ್ರಾಂ ಅಕೌಂಟ್​ನಲ್ಲಿ ಹಿಂದಿನ ಜಂಬೂ ಸವಾರಿಯ‌ ಒಂದು ನಿಮಿಷದ ವಿಡಿಯೋ ತುಣುಕನ್ನು ಹಾಕಿ, ಶುಭಾಶಯ ಕೋರಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv