ಮಹಾನಗರ ಪಾಲಿಕೆ ವಿರುದ್ಧ ರಾಜವಂಶಸ್ಥ ಯದುವೀರ್ ಬೇಸರ

ಮೈಸೂರು: ‘ಲ್ಯಾನ್ಸ್ ಡೌನ್’, ‘ದೇವರಾಜ ಮಾರುಕಟ್ಟೆ’ಗಳನ್ನ ಹಾಗೆ ಉಳಿಸಿಕೊಳ್ಳಬೇಕು. ಎಲ್ಲಾ ಪಾರಂಪರಿಕ ಕಟ್ಟಡಗಳನ್ನ‌ ಕೆಡವುತ್ತಾ ಹೋದ್ರೆ ಮೈಸೂರನ್ನ ಸಾಂಸ್ಕೃತಿಕ ನಗರಿ ಅಂತಾ ಕರೆಯಲು ಎನೂ ಇರಲ್ಲ ಎಂದು ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್​ ಬೇಸರ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಲ್ಯಾನ್ಸ್ ಡೌನ್ ಬಿಲ್ಡಿಂಗ್, ದೇವರಾಜ ಮಾರುಕಟ್ಟೆ ಕೆಡವಿ ಮತ್ತೆ ಪುನರ್ ನಿರ್ಮಾಣ ಮಾಡಲು ಪಾಲಿಕೆ ಯಾಕಿಷ್ಟು ಆಸಕ್ತಿ ತೋರುತ್ತಿದೆ? ತಜ್ಞರ ವರದಿಗಳ ಪ್ರಕಾರ ಎರಡು ಪಾರಂಪರಿಕ ಕಟ್ಟಡಗಳನ್ನ ಪುನರ್‌ ಜೀವನ ಗೊಳಿಸಲು ಅವಕಾಶವಿದೆ. ಇದ್ಕಾಗಿ ಹಲವಾರು ರೀತಿಯ ತಂತ್ರಜ್ಞಾನಗಳು ಚಾಲ್ತಿಯಲ್ಲಿವೆ. ಜೈಪುರ ಸೇರಿದಂತೆ ದೇಶದ ಹಲವಾರು ನಗರಗಳಲ್ಲಿ ಕುಸಿಯುವ ಹಂತದಲ್ಲಿದ್ದ ಕಟ್ಟಡಗಳನ್ನ ಉಳಿಸಿಕೊಳ್ಳಲಾಗಿದೆ. ಅದೇ ರೀತಿ ಮೈಸೂರು ಅರಮನೆ ವತಿಯಿಂದ‌, ಲ್ಯಾನ್ಸ್ ಡೌನ್ ಬಿಲ್ಡಿಂಗ್, ದೇವರಾಜ ಮಾರುಕಟ್ಟೆ ಕೆಡವಿ ಮತ್ತೆ ಪುನರ್ ನಿರ್ಮಾಣ ಮಾಡುವ ಕುರಿತು ತಜ್ಞರ ವರದಿ ತರೆಸಿಕೊಳ್ಳಲಾಗಿದೆ‌. ಎರಡೂ ಕಟ್ಟಡಗಳನ್ನು ಯತಾಸ್ಥಿತಿಯಲ್ಲಿ ಉಳಿಸಿಕೊಳ್ಳಲು ಸಾಧ್ಯವಿದೆ ಎಂದು ಉಲ್ಲೇಖಿಸಲಾಗಿದೆ. ಮಹಾನಗರ ಪಾಲಿಕೆಗೆ ಪಾರಂಪರಿಕ ಕಟ್ಟಡಗಳನ್ನ‌ ಕೆಡವುದರಲ್ಲಿ ಯಾಕಿಷ್ಟು ಆಸಕ್ತಿ ತೋರುತ್ತಿದೆ ಗೊತ್ತಿಲ್ಲ. ಈ ವಿಚಾರವಾಗಿ ಸರ್ಕಾರ ಬಯಸಿದ್ರೆ ನಾನು ಚರ್ಚೆ ಮಾಡಲು ಸಿದ್ಧನಿದ್ದೇನೆ ಎಂದರು.

ಯಾರ ಪರವೂ ಪ್ರಚಾರ ಮಾಡಲ್ಲ
ಲೋಕಸಭೆ ಚುನಾವಣೆ  ಕುರಿತು ಪ್ರತಿಕ್ರಿಯಿಸಿದ ಯದುವೀರ್ ಒಡೆಯರ್,  ನಾನು ಯಾರ ಪರ ಅಥವ ಯಾವ ಪಕ್ಷದ ಪರವಾಗಿಯೂ ಪ್ರಚಾರ ಮಾಡಲ್ಲ. ಅರಮನೆ ಜೊತೆ ಎಲ್ಲ ಪಕ್ಷಗಳ ಸಂಬಂಧ ಚೆನ್ನಾಗಿದೆ. ಎಲ್ಲರ ಜೊತೆಯಲ್ಲೂ ನಾವು ಚೆನ್ನಾಗಿ ಇರೋಕೆ ಪ್ರಯತ್ನ ಮಾಡ್ತೇವೆ. ನಾನು ಶಾಲೆಗಳಿಗೆ ಹೋಗೋದು ಅವುಗಳ ಅಭಿವೃದ್ಧಿ ಮಾಡೋಕೆ. ಜನರ ಜೊತೆ ಸೇರಿ ಕಾರ್ಯಕ್ರಮದಲ್ಲಿ ಭಾಗಿಯಾಗೋದು ಅರಮನೆ ಜೊತೆಗಿನ ಸಂಬಂಧ ಉಳಿಸಿಕೊಳ್ಳೋಕೆ. ಅದನ್ನ ಬಿಟ್ಟು ರಾಜಕೀಯ ಮಾಡುವ ಅಥವ ಇನ್ಯಾವುದೇ ಉದ್ದೇಶ ನನಗಿಲ್ಲ ಎಂದರು.


Follow us on:

YouTube: firstNewsKannada  Instagram: firstnews_tv  Face Book: firstnews.tv  Twitter: firstnews_tv