ನನ್ನ ತಪ್ಪುಗಳನ್ನು ಕೆಟ್ಟ ಕನಸೆಂದು ಮರೆತುಬಿಡಿ: ವೈಎಸ್​ವಿ ದತ್ತ

ಚಿಕ್ಕಮಗಳೂರು: ಸರಳ, ಸಜ್ಜನಿಕೆ ರಾಜಕಾರಣಿ, ಮಾಜಿ ಶಾಸಕ ವೈಎಸ್​ವಿ ದತ್ತ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಸೋಲು ಅನುಭವಿಸಿದ ನಂತರ ತನ್ನ ಕ್ಷೇತ್ರದ ಜನರಿಗೆ ಬಹಿರಂಗ ಪತ್ರದ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ. ಸಾರ್ವಜನಿಕ ಕ್ಷೇತ್ರದಲ್ಲಿ ಬೆಳೆದ ನಾನು ಇಂದು ನಿರುಮ್ಮಳನಾಗಿದ್ದೇನೆ. ನನ್ನ ತನವನ್ನ ಮತ್ತೆ ಕುದುರುಸಿಕೊಳ್ಳಲು ನೀವು ಅಷ್ಟರಮಟ್ಟಿಗೆ ನನ್ನನ್ನ ಒತ್ತಡ ಮುಕ್ತನನ್ನಾಗಿ ಮಾಡಿ ಉಪಕರಿಸಿದ್ದೀರಿ. ಇದಕ್ಕಾಗಿ ನಿಮಗೆ ಕೃತಜ್ಞನಾಗಿದ್ದೇನೆ ಅಂತಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಕಳೆದ 5ವರ್ಷ ನಾನು ನಿಮ್ಮ ಶಾಸಕನಾಗಿ ನಿಮಗೆ ಮಾಡಿರಬಹುದಾದ ಅಪಚಾರ, ಅನ್ಯಾಯ, ಪ್ರಮಾದಗಳಿಂದಾಗಿ ನೀವು ದುಷ್ಟ ಶಿಕ್ಷಕ, ಶಿಷ್ಟ ರಕ್ಷಕರೆಂಬಂತೆ ನನ್ನನ್ನ ಶಿಕ್ಷಿಸಿ ಶಿಷ್ಯರಾದವರಿಗೆ ಮಾನ್ಯತೆ ಸಿಗುವಂತೆ ಮಾಡಿದ್ದೀರಿ. ಜನತಂತ್ರದ ಧರ್ಮವನ್ನ ಸರಿಯಾಗಿಯೇ ಪಾಲಿಸಿದ್ದೀರಿ, ನನ್ನ ತಪ್ಪುಗಳನ್ನು ಕೆಟ್ಟ ಕನಸೆಂದು ಮರೆತುಬಿಡಿ ಅಂತಾ ಮನವಿ ಮಾಡಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv