ಟಿಪ್ಪು ಜಯಂತಿ ವಿರುದ್ಧ ರಿಟ್​, ಆಕ್ಷೇಪಣೆ ಸಲ್ಲಿಸಲು 3 ವಾರಗಳ ಗಡುವು

ಬೆಂಗಳೂರು: ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯನ್ನು ಪ್ರಶ್ನಿಸಿ ಮಡಿಕೇರಿ ಮೂಲದ ಮಂಜುನಾಥ್ ಚಿನ್ನಪ್ಪ, ವಕೀಲ ಪವನ್ ಚಂದ್ರಶೆಟ್ಟಿ ಎಂಬುವವರ ಮೂಲಕ ಹೈ ಕೋರ್ಟ್​ನಲ್ಲಿ ರಿಟ್​ ಅರ್ಜಿ ಸಲ್ಲಿಸಿದ್ದರು.

ಆದರೆ ಅರ್ಜಿ ಸಲ್ಲಿಸಿ 11 ತಿಂಗಳಾದರೂ, ರಾಜ್ಯ ಸರ್ಕಾರದ ಪರ ವಕೀಲರು ಹೈಕೋರ್ಟ್​ಗೆ ಆಕ್ಷೇಪಣೆ ಸಲ್ಲಿಸಿರಲಿಲ್ಲ. ಹೀಗಾಗಿ ಹೈಕೋರ್ಟ್ ಮೂರು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಲು ಸರ್ಕಾರದ ಪರ ವಕೀಲರಿಗೆ ಸೂಚನೆ ನೀಡಿದೆ.