2,26,800 ಕೆ.ಜಿಯ ವಿಮಾನ, ಆಕಾಶದಿಂದ್ಲೇ ರಾಕೆಟ್​ ಲಾಂಚ್ ಮಾಡಬಲ್ಲದು ಈ ಪ್ಲೇನ್

ಕ್ಯಾಲಿಫೋರ್ನಿಯಾ: ವಿಶ್ವದ ಅತ್ಯಂತ ಭಾರದ ವಿಮಾನ ಕ್ಯಾಲಿಫೋರ್ನಿಯಾದ ಮೊಜಾವೆಯಲ್ಲಿ ಹಾರಾಟ ನಡೆಸಿದೆ. ಸುಮಾರು 2 ಲಕ್ಷದ 26 ಸಾವಿರದ 800 ಕೆಜಿ ಭಾರವಿರೋ ಈ ವಿಮಾನದ ರೆಕ್ಕೆಯ ಪಾರ್ಶ್ವಗಳ ದೂರ 385 ಅಡಿ ಇದೆ. ಮೈಕ್ರೋಸಾಫ್ಟ್​​ನ ಸಹ ಸಂಸ್ಥಾಪಕ ಪೌಲ್ ಅಲೇನ್ 2011ರಲ್ಲಿ ಆರಂಭಿಸಿದ ಸ್ಟ್ರಾಟೋಲಾಂಚ್​ ಅನ್ನೋ ಸಂಸ್ಥೆ ಈ ವಿಮಾನವನ್ನು ನಿರ್ಮಾಣ ಮಾಡಿದೆ. 2011ರಲ್ಲಿಯೇ ಈ ವಿಮಾನ ತಯಾರಾಗಿದ್ದು, ಈಗ ಯಶಸ್ವಿಯಾಗಿ ಹಾರಾಟ ನಡೆಸಿದೆ. ಇನ್ನು, ಆಕಾಶದಿಂದ ಕಕ್ಷೆಗೆ ರಾಕೆಟ್​ಗಳನ್ನು ಲಾಂಚ್ ಮಾಡುವ ಸಾಮರ್ಥ್ಯವನ್ನು ಈ ವಿಮಾನ ಹೊಂದಿದೆ. ಇನ್ನು, ಈ ಲೋಹದ ಹಕ್ಕಿ ಆರು ಇಂಜಿನ್​ಗಳನ್ನೊಳಗೊಂಡಿದ್ದು ಸುಮಾರು 35 ಸಾವಿರ ಅಡಿ ಎತ್ತರದಲ್ಲಿ ಹಾರಬಲ್ಲ ಶಕ್ತಿ ಹೊಂದಿದೆ.