‘ಗ್ಲೊಕೊಮಾದಿಂದ ದೃಷ್ಟಿ ಕಳೆದುಕೊಳ್ಳಬೇಡಿ, ಚಿಕಿತ್ಸೆ ಪಡೆಯಿರಿ’

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವಿಶ್ವ ದೃಷ್ಟಿ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ದೇಶಪಾಂಡೆ ನಗರದ ಜಯಪ್ರಿಯ ಕಣ್ಣಿನ ಆಸ್ಪತ್ರೆಯ ವತಿಯಿಂದ ವಿಶ್ವ ದೃಷ್ಟಿ ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಖ್ಯಾತ ವೈದ್ಯರಾದ ಡಾ.ವಿ.ಜಿ ನಾಡಗೌಡ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಗ್ಲೊಕೊಮಾ ಅನ್ನುವುದು ಕಣ್ಣಿಗೆ ಸಂಬಂಧಿಸಿದ ದೋಷವಾಗಿದ್ದು, ಇತ್ತೀಚೆಗೆ ಈ ದೋಷದಿಂದಾಗಿ ಬಹಳಷ್ಟು ಜನರು ದೃಷ್ಟಿ ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ ಕಣ್ಣಿಗೆ ಸಂಬಂಧಿಸಿದ ಯಾವುದೇ ತೊಂದರೆಯಾದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ದೃಷ್ಟಿ ತಪಾಸಣೆಗೆ ಬಂದಿದ್ದ ಜನರಿಗೆ ಕಿವಿ ಮಾತು ಹೇಳಿದರು. ಅಲ್ಲದೇ ಜಯಪ್ರಿಯ ಆಸ್ಪತ್ರೆಯು ಉಚಿತ ಗ್ಲೊಕೊಮಾ ತಪಾಸಣೆ ಶಿಬಿರ ಆಯೋಜಿಸುವ ಮೂಲಕ, ಗ್ಲೊಕೊಮಾ ದೋಷದ ಕುರಿತು ಜಾಗೃತಿ‌ ಮೂಡಿಸುತ್ತಿರುವುದನ್ನು ಶ್ಲಾಘಿಸಿದರು. ಕಾರ್ಯಕ್ರಮದ ಬಳಿಕ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ ಉಚಿತ ಗ್ಲೊಕೊಮಾ ದೃಷ್ಟಿ ತಪಾಸಣೆಯಲ್ಲಿ ಜನರು, ತಮ್ಮ ದೃಷ್ಟಿ ದೋಷಗಳ ಚಿಕಿತ್ಸೆ ಪಡೆದುಕೊಂಡರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv