ಕಿಡ್ನಿ ಆರೋಗ್ಯ ಕಾಪಾಡಲು ತಪ್ಪದೇ ಹೀಗೆ ಮಾಡಿ!

ಇತ್ತೀಚಿನ ದಿನಗಳಲ್ಲಿ ನಮ್ಮ ಆರೋಗ್ಯವನ್ನ ಕಾಪಾಡಿಕೊಳ್ಳುವುದು ತುಂಬಾ ತುಂಬಾ ಅಗತ್ಯ. ಯಾಕಂದ್ರೆ ಬದಲಾಗುತ್ತಿರುವ ನಮ್ಮ ಜೀವನ ಶೈಲಿ ಅನೇಕ ಕಾಯಿಲೆಗಳನ್ನ ತಂದೊಡ್ಡುವ ಸಾಧ್ಯತೆಗಳು ಹೆಚ್ಚಿರುತ್ತವೆ. ಅದರಲ್ಲೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರು ತಮ್ಮ ಆರೋಗ್ಯದ ಕುರಿತು ಹೆಚ್ಚು ಕಾಳಜಿ ವಹಿಸಬೇಕು. ದೀರ್ಘಕಾಲದ ಕಿಡ್ನಿ ಕಾಯಿಲೆ ಅಥವಾ ಸೋಂಕು ಕಿಡ್ನಿ ಡ್ಯಾಮೇಜ್​ ಆಗಲು ಕಾರಣವಾಗಬಹುದು ಜೊತೆಗೆ ತನ್ನ ಕಾರ್ಯವನ್ನ ಸ್ಥಗಿತಗೊಳಿಸಬಹುದು, ಎಚ್ಚರಾ!
‘ಈ ರೀತಿಯ ಸಮಸ್ಯೆ ಉಂಟಾಗದಂತೆ ನಾವು ಮುನ್ನೆಚ್ಚರಿಕೆ ಕ್ರಮವಾಗಿ ಕೆಲವೊಂದು ನಿಯಮಗಳನ್ನ ಅನುಸರಿಸಿದ್ರೆ ಸಾಕು ಆರೋಗ್ಯವಂತಾಗಿರಬಹುದು.
1. ನೀರು: ಹೆಚ್ಚು ನೀರನ್ನ ಸೇವಿಸುವುದರಿಂದ ನಮ್ಮ ದೇಹದಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾಗಳು ಮೂತ್ರದ ಮೂಲಕ ಹೊರಹೋಗುತ್ತದೆ. ಇದರಿಂದ ನಿಮ್ಮ ಕಿಡ್ನಿಯನ್ನ ಆರೋಗ್ಯವಾಗಿರಿಸುತ್ತದೆ. ಅದಕ್ಕಾಗಿ ದಿನಕ್ಕೆ ಕನಿಷ್ಠ ಪಕ್ಷ 8 ಗ್ಲಾಸ್​ ನೀರನ್ನ ಸೇವಿಸಿ.
2. ಆಲ್ಕೋಹಾಲ್, ಕಾಫಿ ಸೇವನೆಯನ್ನ ಕಡಿಮೆ ಮಾಡಿ: ಅತಿಯಾದ ಆಲ್ಕೋಹಾಲ್​ ಹಾಗೂ ಕಾಫಿ ಸೇವನೆ ಕಿಡ್ನಿ ಸಮಸ್ಯೆಗೆ ಕಾರಣವಾಗಬಹುದು. ಆರೋಗ್ಯಕ್ಕೆ ಹಾನಿ ಉಂಟು ಮಾಡುವ ಬ್ಯಾಕ್ಟೀರಿಯಾ ಹಾಗೂ ಟಾಕ್ಸಿನ್​​ಗಳನ್ನ ದೇಹದಿಂದ ಹೊರಹಾಕುವುದು ಕಿಡ್ನಿಯ ಕೆಲಸ. ಆದರೆ ಆಲ್ಕೋಹಾಲ್​ ಹಾಗೂ ಕೆಫೆನ್​ ಇದಕ್ಕೆ ಅಡ್ಡಿಯುಂಟುಮಾಡಬಹುದು.
3. ವಿಟಮಿನ್ ಸಿ: ವಿಟಮಿನ್​ ‘ಸಿ’ಯಲ್ಲಿ ಆ್ಯಂಟಿ ಆ್ಯಕ್ಸಿಡೆಂಟ್​ ಅಂಶವು ಸಮೃದ್ಧವಾಗಿದೆ. ಇದು ಆಕ್ಸಿಡೇಟಿವ್​ ಸ್ಟ್ರೆಸ್​ನಿಂದ ದೇಹದ ಅಂಗಾಂಶಗಳನ್ನು ರಕ್ಷಿಸುತ್ತದೆ. ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರಗಳಲ್ಲಿ ಸಿಟ್ರಸ್ ಹಣ್ಣುಗಳು, ಸೌತೆಕಾಯಿಗಳು, ಟೊಮ್ಯಾಟೊಗಳು, ಗಡ್ಡೆ ಕೋಸುಗಳಂತಹ ಆಹಾರಗಳನ್ನ ಹೆಚ್ಚಾಗಿ ಸೇವಿಸಿ.
4. ಕ್ರ್ಯಾನ್ಬೆರಿ ಜ್ಯೂಸ್​: ಕ್ರ್ಯಾನ್ಬೆರಿ ಜ್ಯೂಸ್​ ಕಿಡ್ನಿ ಆರೋಗ್ಯವಾಗಿ ಕೆಲಸ ಮಾಡಲು ರಾಮಬಾಣವಾಗಿ ಕೆಲಸ ಮಾಡುತ್ತದೆ. ಇದು ಮೂತ್ರದ ಸೋಂಕುಗಳಿಗೆ ಪರಿಣಾಮಕಾರಿ ಮನೆ ಮದ್ದಾಗಿದೆ.
5. ಆ್ಯಪಲ್ಸ್: ಆ್ಯಪಲ್​ಗಳಲ್ಲಿರುವ ಹೈ-ಆಸಿಡ್ ಅಂಶವು ಮೂತ್ರದಲ್ಲಿ ಅಸಿಡಿಟಿ ಉಂಟಾಗದಂತೆ ತಡೆದು, ಮತ್ತಷ್ಟು ಬ್ಯಾಕ್ಟೀರಿಯಾಗಳು ಬೆಳವಣಿಗೆಯಾಗದಂತೆ ಕಾರ್ಯ ನಿರ್ವಹಿಸುತ್ತದೆ. ಹಾಗೂ ಕಿಡ್ನಿಯ ಸೋಂಕಿನ ನಂತರ ಉಂಟಾಗುವ ಊತವನ್ನ ಕಡಿಮೆ ಮಾಡುವ ಆ್ಯಂಟಿ ಇನ್​ಫ್ಲಾಮೇಟರಿ ಗುಣಗಳನ್ನ ಆ್ಯಪಲ್​ ಹೊಂದಿದೆ.
6. ಪ್ರೋಬಯಾಟಿಕ್ಸ್​ಗಳು: ಪ್ರೋಬಯಾಟಿಕ್ಸ್​ಗಳು ​​ದೇಹಕ್ಕೆ ಬೇಕಾದ ಆರೋಗ್ಯಕರ ಬ್ಯಾಕ್ಟೀರಿಯಾಗಳನ್ನ ಒದಗಿಸುತ್ತವೆ ಮತ್ತು ದೇಹದಿಂದ ತ್ಯಾಜ್ಯ ವಸ್ತುಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv