ಗಿಡ ನೆಡುವ ಮೂಲಕ ಜಿಲ್ಲಾಧಿಕಾರಿಯಿಂದ ವಿಶ್ವ ಪರಿಸರ ದಿನ ಆಚರಣೆ

ಯಾದಗಿರಿ: ಇಂದು ನಡೆದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಯಾದಗಿರಿಯಲ್ಲಿ ಜಿಲ್ಲಾಧಿಕಾರಿ ಮಂಜುನಾಥ ಜೆ, ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಿಸಿದ್ರು. ನಗರದ ಜಿಲ್ಲಾ ಕ್ರೀಡಾಂಗಣಕ್ಕೆ ತೆರಳಿದ ಜಿಲ್ಲಾಧಿಕಾರಿಗಳು ಗಿಡ ನೆಟ್ಟು ಅದಕ್ಕೆ ನೀರು ಹಾಕುವ ಮೂಲಕ ಪರಿಸರ ಜಾಗೃತಿ ಮೂಡಿಸಿದರು. ಪ್ರತಿಯೊಬ್ಬರೂ ಗಿಡಮರಗಳನ್ನು ಬೆಳಸಿ ಪರಿಸರವನ್ನು ಉಳಿಸಬೇಕಾಗಿದೆ. 2018-19ಸಾಲಿನಲ್ಲಿ ಜಿಲ್ಲೆಯಾದ್ಯಂತ 9 ಲಕ್ಷ ಸಸಿ ನೆಡುವ ಗುರಿ ಹೊಂದಲಾಗಿದೆ. ಸಾರ್ವಜನಿಕರು ತಮ್ಮ ಮನೆ, ಜಮೀನು ಹಾಗೂ ಶಾಲೆ ಕಾಲೇಜ್​ಗಳಲ್ಲಿ ಸಸಿ ನೆಡಬೇಕೆಂದು ಮನವಿ ಮಾಡಿದ್ರು. ಅಲ್ಲದೆ ಪ್ಲಾಸ್ಟಿಕ್ ಇತರ ವಸ್ತುಗಳು ಬಳಕೆ ಮಾಡುವುದು ಬಿಟ್ಟು, ಸ್ವಚ್ಛ ಪರಿಸರದ ಕಡೆ ನಾವೆಲ್ಲರೂ ಸಾಗಬೇಕಾಗಿದೆ, ಪರಿಸರ ರಕ್ಷಿಸಿ ಆರೋಗ್ಯ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಭಾಗಿಯಾಗಿದ್ದರು.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv