ವಿಶ್ವಕಪ್​ಗೆ​ ಟೀಂ ಇಂಡಿಯಾ ಪ್ರಕಟ..! ಕನ್ನಡಿಗ ಕೆ.ಎಲ್​ ರಾಹುಲ್​ಗೆ​ ಸ್ಥಾನ..!

ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಪ್ರಕಟವಾಗಿದೆ. ಮುಂಬೈಯಲ್ಲಿ ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್​ಕೆ ಪ್ರಸಾದ್​ ನೇತೃತ್ವದಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ 15 ಆಟಗಾರರನ್ನ ಆಯ್ಕೆ ಮಾಡಲಾಗಿದೆ. ಈ ಸಭೆಯಲ್ಲಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಕೂಡ ಭಾಗವಹಿಸಿದ್ರು. ಸಾಕಷ್ಟು ಅಳೆದು ತೂಗಿ ಇಂಗ್ಲೆಂಡ್​ನಲ್ಲಿ ನಡೆಯುವ ಮಹಾಸಂಗ್ರಾಮಕ್ಕೆ ವಿರಾಟ್​ ಕೊಹ್ಲಿ ಸೈನ್ಯವನ್ನ ಸಿದ್ಧಗೊಳಿಸಲಾಗಿದೆ. ಮೇ 30 ರಿಂದ ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಜೂನ್ 5 ರಂದು ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯವಾಡಲಿದೆ.

ವಿಶ್ವಕಪ್​ಗೆ ಟೀಂ ಇಂಡಿಯಾ 15 ಆಟಗಾರರು:

ವಿರಾಟ್​ ಕೊಹ್ಲಿ(ನಾಯಕ), ರೋಹಿತ್ ಶರ್ಮಾ( ಉಪ ನಾಯಕ), ಶಿಖರ್ ಧವನ್, ಕೆ.ಎಲ್​ ರಾಹುಲ್, ವಿಜಯ್ ಶಂಕರ್, ಎಂ.ಎಸ್​. ಧೋನಿ, ಕೇದಾರ್ ಜಾಧವ್, ದಿನೇಶ್ ಕಾರ್ತಿಕ್, ಕುಲ್​ದೀಪ್ ಯಾದವ್, ಯುಜುವೇಂದರ್ ಚಹಾಲ್​, ಹಾರ್ದಿಕ್ ಪಾಂಡ್ಯಾ, ರವೀಂದ್ರ ಜಡೇಜಾ, ಮಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್