ಇವು ಫಿಫಾ ವರ್ಲ್ಡ್​​ಕಪ್​ನ ವ್ಯಾಲ್ಯುಬಲ್​ ಟೀಮ್..!

ಇಂದಿನಿಂದ 2018ರ ಫಿಫಾ ವರ್ಲ್ಡ್​ ಕಪ್​ ರಷ್ಯಾದಲ್ಲಿ ಅದ್ದೂರಿಯಾಗಿ ಚಾಲನೆಗೊಳ್ಳುತ್ತಿದೆ. ವಿಶ್ವದ ದೊಡ್ಡ ಕ್ರೀಡಾಕೂಟಗಳಲ್ಲಿ ಒಂದಾಗಿರುವ ಫುಟ್ಬಾಲ್​ ವಿಶ್ವಕಪ್​ನಲ್ಲಿ, 32 ತಂಡಗಳು ಭಾಗವಹಿಸುತ್ತಿವೆ. 32 ದಿನಗಳ ಕಾಲ ದೀರ್ಘಾವಧಿ ಟೂರ್ನಿಯಲ್ಲಿ ಫೈನಲ್​ ಸೇರಿ ಒಟ್ಟು 64 ಪಂದ್ಯಗಳು ನಡೆಯಲಿವೆ. ಇನ್ನೂ ಈ ದೊಡ್ಡ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ತಂಡಗಳಲ್ಲಿ ಇವು ಅತ್ಯಂತ ವ್ಯಾಲ್ಯುಬಲ್​ ಟೀಮ್​ಗಳಾಗಿವೆ.

ಟಾಪ್​-1 ವ್ಯಾಲ್ಯುಬಲ್​ ಟೀಮ್ ಫ್ರಾನ್ಸ್​​​​
2018ರ ವಿಶ್ವಕಪ್​ ಫುಟ್ಬಾಲ್​ ಟೂರ್ನಿಯ ಮೋಸ್ಟ್​ ವ್ಯಾಲ್ಯುಬಲ್​ ಟೀಮ್​ಗಳ ಪಟ್ಟಿಯಲ್ಲಿ ಫ್ರಾನ್ಸ್​​​​ಮೊದಲ ಸ್ಥಾನದಲ್ಲಿದೆ. 1998ರಲ್ಲಿ ಚೊಚ್ಚಲ ವಿಶ್ವಕಪ್​ ಗೆದ್ದ ಫ್ರಾನ್ಸ್​​, ಈ ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಂತ ಹೆಚ್ಚು ಬೆಲೆಬಾಳುವ ತಂಡವಾಗಿದೆ. ಪ್ರಸ್ತುತ ಬರೋಬ್ಬರಿ 8800 ಕೋಟಿ ರೂ.ಗಳ ಮೊತ್ತದ ವ್ಯಾಲ್ಯು ಹೊಂದಿರುವ ಫ್ರಾನ್ಸ್, ಜಗತ್ತಿನ ನಂಬರ್​​ ಒನ್​ ವ್ಯಾಲ್ಯುಬಲ್ ತಂಡವಾಗಿದೆ.​

ಟಾಪ್​-2 ಸ್ಥಾನದಲ್ಲಿ ಸ್ಪೇನ್​..!
ಇನ್ನು ವಿಶ್ವಕಪ್​ ಟೂರ್ನಿಯಲ್ಲಿ 2ನೇ ಬೆಲೆಬಾಳುವ ತಂಡ ಅಂದ್ರೆ ಸ್ಪೇನ್​. ಬರೋಬ್ಬರಿ 8400 ಕೋಟಿ ರೂ.ಗಳಿಗೂ ಹೆಚ್ಚು​​​ ವ್ಯಾಲ್ಯು ಹೊಂದಿರುವ ಸ್ಪೇನ್​, 2010ರಲ್ಲಿ ವಿಶ್ವಕಪ್​ ಗೆದ್ದು ಸಾಧನೆ ಮಾಡಿತ್ತು.

ಟಾಪ್​-3 ಸ್ಥಾನದಲ್ಲಿ ಬ್ರೆಜಿಲ್..!
ಫಿಫಾ ವರ್ಲ್ಡ್​​ಕಪ್​ ಟೂರ್ನಿಯ ಮೋಸ್ಟ್​​ ಸಕ್ಸಸ್​ಫುಲ್ ಟೀಮ್​ ಬ್ರೆಜಿಲ್​, 3ನೇ​ ವ್ಯಾಲ್ಯುಬಲ್ ಟೀಮ್ ​​ಆಗಿದೆ. ಬರೋಬ್ಬರಿ 8000 ಕೋಟಿ ಬೆಲೆಬಾಳುವ ಬ್ರೆಜಿಲ್​, ಇದುವರೆಗೂ 5 ಬಾರಿ ವಿಶ್ವಕಪ್ ಚಾಂಪಿಯನ್​ ಪಟ್ಟವನ್ನ ಅಲಂಕರಿಸಿತ್ತು. 2002 ರಲ್ಲಿ ಕೊನೆಯ ಬಾರಿ ವಿಶ್ವ ಕಪ್ ಎತ್ತಿ ಹಿಡಿದಿದ್ದ ಬ್ರೆಜಿಲ್​ ಈ ಬಾರಿ ಕಪ್​ ಗೆಲ್ಲುವ ಫೇವರೆಟ್​ ತಂಡವಾಗಿದೆ.

ಟಾಪ್​-4 ಸ್ಥಾನದಲ್ಲಿ ಜರ್ಮನಿ..!
2014ರ ಫಿಫಾ ವಿಶ್ವಕಪ್ ಚಾಂಪಿಯನ್​​ ವಿಜೇತ ಜರ್ಮನಿ, ಈ ಟೂರ್ನಿಯ 4ನೇ ವ್ಯಾಲ್ಯುಬಲ್​ ತಂಡವಾಗಿದೆ. ಅತಿ ಹೆಚ್ಚು ವಿಶ್ವಕಪ್​ಗೆದ್ದವರ ಸಾಲಿನಲ್ಲಿ ಬ್ರೆಜಿಲ್​ ನಂತರದ ಸ್ಥಾನ ಹೊಂದಿರುವ ಜರ್ಮನಿ ಇದುವರೆಗೂ 4 ಬಾರಿ ಚಾಂಪಿಯನ್ ಆಗಿದ್ದು, ಈ ಬಾರಿಯ ವಿಶ್ವಕಪ್​ನಲ್ಲಿ 7200 ಕೋಟಿ ವ್ಯಾಲ್ಯುವ್​ ಹೊಂದಿದೆ.

ಟಾಪ್​-5 ಸ್ಥಾನದಲ್ಲಿ ಇಂಗ್ಲೆಂಡ್​​​..!

ಶ್ರೀಮಂತ ಟೂರ್ನಿಯಾದ ಫಿಫಾ ವರ್ಲ್ಡ್​​ಕಪ್​ ವ್ಯಾಲ್ಯುಬಲ್ ಟೀಮ್​ಗಳ ಪಟ್ಟಿಯಲ್ಲಿ ಇಂಗ್ಲೆಂಡ್​​ 5ನೇ ಸ್ಥಾನದಲ್ಲಿದೆ. 1966ರಲ್ಲಿ ವಿಶ್ವಕಪ್​ ಗೆದ್ದಿದ್ದ ಇಂಗ್ಲೆಂಡ್​​ ಸರಿಸುಮಾರು 7100 ಕೋಟಿ ರೂಪಾಯಿಗೂ ಅಧಿಕ ವ್ಯಾಲ್ಯು ಹೊಂದಿದೆ.

 

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv