ಜೀವ ಜಲ ಸಂರಕ್ಷಣೆ ಕುರಿತಾಗಿ ಅರಿವು ಮೂಡಿಸಲು ಕಾರ್ಯಾಗಾರ

ಕಾರವಾರ: ಜೀವಜಲ ಸಂರಕ್ಷಣೆ ಕುರಿತಾಗಿ ಅರಿವು ಮೂಡಿಸಲು ಸಿದ್ದಾಪುರದ ತಾಲೂಕು ಆಡಳಿತ ಹಾಗೂ ಎನ್​​ಎಸ್​​ಎಸ್ ಘಟಕದ ಸಹಯೋಗದಲ್ಲಿ ಎಂ.ಜಿ.ಸಿ ಮಹಾವಿದ್ಯಾಲಯದಲ್ಲಿ ಒಂದು ದಿನದ ಕಾರ್ಯಾಗಾರ ನಡೆಯಿತು.
ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಶಿರಸಿ ಉಪವಿಭಾಗಾಧಿಕಾರಿ ರಾಜು ಮೊಗವೀರ, 20-20 ಅಂದ್ರೆ ಜನರ ಮನಸ್ಸಿನಲ್ಲಿ ಮೂಡುವುದು ಐಪಿಎಲ್. ಆದರೆ ಅಬ್ದುಲ್ ಕಲಾಂ ಅವರು ಈ ಹಿಂದೆಯೇ 2020 ರ ವೇಳೆಗೆ ನೀರಿನ ಸಂಪೂರ್ಣ ಸಂರಕ್ಷಣೆ ಎನ್ನುವ ಕಾನ್ಸೆಪ್ಟ್ ತಂದಿದ್ದರು. ಇದನ್ನ ಉಳಿಸುವುದಕ್ಕೆ ನಾವು ಶ್ರಮಿಸಬೇಕು. ನೀರನ್ನು ಉಪಯೋಗಿಸುವುದು ನಿರಂತರ ಪ್ರಕ್ರಿಯೆ. ಆದ್ರೆ ಆ ನೀರನ್ನು ಸರಿಯಾದ ರೀತಿಯಲ್ಲಿ ಸಂರಕ್ಷಿಸುವ ಕಾರ್ಯ ಆಗಬೇಕಿದೆ. ಜೀವಜಲ ಸಂರಕ್ಷಣೆಗಾಗಿ ಇಂದಿನ ಒಂದು ಸಣ್ಣ ಹೆಜ್ಜೆ ಮುಂದೆ ಒಂದು ಸತ್ಯಾಗ್ರಹಕ್ಕೆ ಪ್ರೇರಣೆ ನೀಡಬಹುದು. ಈ ದಿಶೆಯಲ್ಲಿ ಎನ್​​ಎಸ್​​ಎಸ್ ಈ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದರು.

ಕಸ ಬಿಸಾಡುವುದು ಸುಲಭ, ಆದ್ರೆ ಅದನ್ನ ಸ್ವಚ್ಛ ಮಾಡುವುದು ಕಷ್ಟ. ಈ ಎಲ್ಲ ವಿಷಯಗಳು ಒಂದು ದಿನಕ್ಕೆ ಸೀಮಿತವಾಗದೇ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಪರಿಸರ ತಜ್ಞರಾದ ಶಿವಾನಂದ ಕಳವೆ, ಎಸ್.ಎಲ್.ಎಂ ಸ್ವಾಮಿ, ತಹಶೀಲ್ದಾರ್ ಪಟ್ಟರಾಜ ಗೌಡ ಹಾಗೂ ಮಹಾವಿದ್ಯಾಲಯದ ಪ್ರಾಂಶುಪಾಲೆ ಜಯಂತಿ ಶಾನಭಾಗ ಉಪಸ್ಥಿತರಿದ್ದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv