ಬೇಲೂರು ಬಿಜೆಪಿ ಆತ್ಮಾವಲೋಕನ ಸಭೆಯಲ್ಲಿ ಕಾರ್ಯಕರ್ತರ ಕಚ್ಚಾಟ..!

ಹಾಸನ: ಜಿಲ್ಲೆಯಲ್ಲಿ ಜಿದ್ದಾಜಿದ್ದಿನ ಕಣವೆಂದೇ ಗುರುತಿಸಿಕೊಂಡಿದ್ದ ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ಹೆಚ್​.ಕೆ ಸುರೇಶ್​ ಪರಾಭವ ಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಬಿಜೆಪಿ ಆತ್ಮಾವಲೋಕನ‌ ಸಭೆ ನಡೆಸಿದ್ದಾರೆ. ಈ ವೇಳೆ ಕಾರ್ಯಕರ್ತರ ನಡುವೆ ಗದ್ದಲ ಗಲಾಟೆ ಏರ್ಪಟ್ಟಿದೆ. ಬೇಲೂರಿನಲ್ಲಿ‌ ಜಿಲ್ಲಾ‌ ನಾಯಕರ ಸಮ್ಮುಖದಲ್ಲೇ ಕಾರ್ಯಕರ್ತರು ಕಚ್ಚಾಡಿಕೊಂಡಿದ್ದಾರೆ. ಬಿಜೆಪಿ ಸೋಲಿಗೆ ನಾಯಕರೇ ಹೊಣೆ ಅಂತಾ ಘೋಷಣೆ ಕೂಗಿ ಕಾರ್ಯಕರ್ತರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಬೇಲೂರಿನ‌ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಪರಾಜಿತ ಬಿಜೆಪಿ ಅಭ್ಯರ್ಥಿ ಹುಲ್ಲಹಳ್ಳಿ ಸುರೇಶ್ ನೇತೃತ್ವದಲ್ಲಿ ಸಭೆ ನಡೆದಿದ್ದು. ತಾಲ್ಲೂಕು ಬಿಜೆಪಿ ನಾಯಕರ ವೈಫಲ್ಯವೇ ಬಿಜೆಪಿ ಸೋಲಿಗೆ ಕಾರಣ ಅಂತಾ ಆರೋಪಿಸಿದ ಕಾರ್ಯಕರ್ತರು ನಾಯಕರ ಜೊತೆ ವಾಗ್ವಾದ ನಡೆಸಿದ್ರು. ಬೇರೆ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಪಕ್ಷದ್ರೋಹ ಮಾಡಿದ್ದಾರೆಂದು ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇನ್ನು ಕಾರ್ಯಕರ್ತರು ಕೇಳಿದ ಪ್ರಶ್ನೆಗೆ ಉತ್ತರ ನೀಡಲಾಗದೆ ಜಿಲ್ಲಾ ನಾಯಕರು ಪರದಾಡಿದ್ರು.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv