40 ವರ್ಷ ಮೇಲ್ಪಟ್ಟವರು ಹೊಸ ಪಿಂಚಣಿ ಸ್ಕೀಂಗೆ ಅರ್ಹರಲ್ಲ!

ನವದೆಹಲಿ: ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್​ನಲ್ಲಿ ಪ್ರಧಾನ್​ ಮಂತ್ರಿ ಶ್ರಮ್​ ಯೋಗಿ ಮನ್​-ಧನ್​ ಯೋಜನೆಯನ್ನು ಜಾರಿಗೆ ತರುವ ಬಗ್ಗೆ ಘೋಷಣೆ ಮಾಡಲಾಗಿದೆ. ಆದ್ರೀಗ ಈ ಪಿಂಚಣಿ ಯೋಜನೆಗೆ 40 ವರ್ಷ ಮೇಲ್ಪಟ್ಟವರು ಅರ್ಹರಲ್ಲ ಎಂದು ನೋಟಿಫಿಕೇಷನ್​ನಲ್ಲಿ ಹೇಳಲಾಗಿದೆ. ಈ ಯೋಜನೆಯಡಿ ಅಸಂಘಟಿತ ಕಾರ್ಮಿಕರು 18ನೇ ವಯಸ್ಸಿನಿಂದ 60 ವರ್ಷದ ತನಕ ಮಾಸಿಕ 55 ರೂಪಾಯಿ ಕಟ್ಟಿದ್ದಲ್ಲಿ, ನಿವೃತ್ತಿ ಬಳಿಕ ಮಾಸಿಕ 3000 ರೂಪಾಯಿ ಪಿಂಚಣಿ ಪಡೆಯಬಹುದಾಗಿದೆ. ಆದ್ರೆ 40 ವರ್ಷ ಮೇಲ್ಪಟ್ಟ  ಕಾರ್ಮಿಕರು ಈ ಯೋಜನೆಗೆ ಅರ್ಹರಲ್ಲ ಎಂದು ಸೂಚಿಸಿದೆ.  40ರ ವಯಸ್ಸಿನ ಕಾರ್ಮಿಕರು ಪ್ರತಿ ತಿಂಗಳು 200 ರೂಪಾಯಿ ಕಟ್ಟುವ ಮೂಲಕ ಯೋಜನೆಯ ಲಾಭ ಪಡೆಯಬಹುದು.


Follow us on:

YouTube: firstNewsKannada  Instagram: firstnews_tv  Face Book: firstnews.tv  Twitter: firstnews_tv