ಭೂಮಿ ಉಳುಮೆ ಮಾಡಿದ್ದಕ್ಕೆ ಹೀಗಾ ಮಾಡೋದು…?

ರಾಜಸ್ತಾನ: ಆಸ್ತಿ ವಿವಾದ ಸಂಬಂಧ ಮಹಿಳೆೆಯೊಬ್ಬರನ್ನು ಆಕೆಯ ಸಹೋದರಿ ಹಾಗೂ ಸಂಬಂಧಿಕರು ಮರಕ್ಕೆ ಕಟ್ಟಿ ಹಿಗ್ಗಾ-ಮುಗ್ಗಾ ಥಳಿಸಿರುವ ಅಮಾನವೀಯ ಘಟನೆ ರಾಜಸ್ತಾನದ ಝುನ್​​ಜುನು ಜಿಲ್ಲೆಯ ನವಲ್​​ಘರ್​​ನಲ್ಲಿ ನಡೆದಿದೆ. ಕೃಷಿಭೂಮಿ ಆಸ್ತಿ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಗಲಾಟೆಯಾಗಿದೆ. ಈ ವೇಳೆ ತನ್ನ ಮೂವರು ಮಕ್ಕಳ ಮುಂದೆಯೇ ಮಹಿಳೆಯನ್ನು ಮರಕ್ಕೆ ಕಟ್ಟಿ, ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಮಕ್ಕಳು ಅಮ್ಮನನ್ನು ಹೊಡಿಬೇಡಿ ಅಂತ ಎಷ್ಟೇ ಬೇಡಿಕೊಂಡ್ರೂ ಇದಕ್ಕೆ ಕ್ಯಾರೇ ಎನ್ನದ ಕಲ್ಲು ಹೃದಯ ತನ್ನ ಸಹೋದರಿಯೇ ಥಳಿಸಿದ್ದಾಳೆ. ಜುಲೈ 6ರಂದು ಈ ಘಟನೆ ನಡೆದದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಹಿಳೆಯನ್ನು ಥಳಿಸುತ್ತಿದ್ದ ದೃಶ್ಯವನ್ನು ಪಕ್ಕದ ಮನೆಯವರು ಮೊಬೈಲ್​​ನಲ್ಲಿ ಸೆರೆ ಹಿಡಿದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ಆಗಿದೆ. ದಯಾರಾಮ್​​ ಜಟ್​ ಮತ್ತು ಮಣಿರಾಮ್​​​ ಜಟ್​​​​ ಸಹೋದರ ನಡುವೆ ಕೃಷಿ ಭೂಮಿಗೆ ಸಂಬಂಧಿಸಿ ಗಲಾಟೆಯಾಗಿತ್ತು. ಇಲ್ಲಿನ ನವಲ್​​ಘರ್​ನಲ್ಲಿದ್ದ ವಿವಾದದ ಕೃಷಿ ಭೂಮಿಯಲ್ಲಿ ಮಣಿರಾಮ್​​,​ ಉಳುಮೆ ಆರಂಭಿಸಿದ್ದ. ಇದನ್ನು ತಿಳಿದ ಸಂಬಂಧಿಕರು ಆತನ ಪತ್ನಿಗೆ ಥಳಿಸಿದ್ದಾರೆ.