ಪ್ರಚೋದನಕಾರಿ ಹೇಳಿಕೆ ಆರೋಪ, ಬಂಧನಕ್ಕೊಳಗಾಗಿದ್ದ ಶ್ರುತಿ ಬೆಳ್ಳಕ್ಕಿಗೆ ಜಾಮೀನು

ಧಾರವಾಡ: ಪ್ರತ್ಯೇಕ ಲಿಂಗಾಯತ ಧರ್ಮ ವಿರೋಧಿಸಿ ಫೇಸ್‌ಬುಕ್​ನಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಆರೋಪದಡಿ ಬಂಧನಕ್ಕೊಳಗಾಗಿದ್ದ ಶ್ರುತಿ ಬೆಳ್ಳಕ್ಕಿ ಅವರಿಗೆ ಜಾಮೀನು ಮಂಜೂರಾಗಿದೆ. ಪ್ರಕರಣ ಸಂಬಂಧ ಇಂದು ವಿಚಾರಣೆ ನಡೆಸಿದ ಧಾರವಾಡದ ಒಂದನೇ ಹೆಚ್ಚುವರಿ ಸಿವಿಲ್‌ ನ್ಯಾಯಾಲಯದ ನ್ಯಾ. ಅಚ್ಚಪ್ಪ ದೊಡ್ಡಬಸವರಾಜ ಅವರು ಷರತ್ತುಬದ್ಧ ಜಾಮೀನು‌ ಮಂಜೂರು ಮಾಡಿದ್ದಾರೆ. ಶ್ರುತಿ ಬೆಳ್ಳಕ್ಕಿ ಕಡೆಯಿಂದ ₹50 ಸಾವಿರ ಬಾಂಡ್, ಒಬ್ಬರ ಶ್ಯೂರಿಟಿ, ಸಾಕ್ಷಿ ನಾಶ ಮಾಡಬಾರದು, ವಿಚಾರಣೆಗೆ ಸಹಕರಿಸಲು ಸೂಚಿಸಿ ಜಾಮೀನು ನೀಡಿದ್ದಾರೆ. ಶ್ರುತಿ ಬೆಳ್ಳಕ್ಕಿ ಅವರನ್ನು ಜಿಲ್ಲೆಯ ಗರಗ ಠಾಣಾ ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ: ಪ್ರತ್ಯೇಕ ಲಿಂಗಾಯತ ಧರ್ಮ ವಿರೋಧಿಸಿ ಪ್ರಚೋದನಕಾರಿ ಪೋಸ್ಟ್ ಆರೋಪ, ಮಹಿಳೆ ಬಂಧನ


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv