ಪ್ರತ್ಯೇಕ ಲಿಂಗಾಯತ ಧರ್ಮ ವಿರೋಧಿಸಿ ಪ್ರಚೋದನಕಾರಿ ಪೋಸ್ಟ್ ಆರೋಪ, ಮಹಿಳೆ ಬಂಧನ

ಧಾರವಾಡ: ಪ್ರತ್ಯೇಕ ಲಿಂಗಾಯತ ಧರ್ಮ ವಿರೋಧಿಸಿ ಫೇಸ್‌ಬುಕ್​ನಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಆರೋಪದಡಿ ನಗರದಲ್ಲಿ ಓರ್ವ ಬಿಜೆಪಿಯ ಕಾರ್ಯಕರ್ತೆಯನ್ನ ಬಂಧಿಸಲಾಗಿದೆ. ಶ್ರುತಿ ಬೆಳ್ಳಕ್ಕಿ ಬಂಧಿತ ಮಹಿಳೆ.  ಇವರು ಧಾರವಾಡ ತಾಲೂಕಿನ ಗರಗ ಗ್ರಾಮದವರು. ಬಂಧಿತ ಮಹಿಳೆ ಶ್ರುತಿ, ಫೇಸ್‌ಬುಕ್‌ ಮೂಲಕ ಮಾತನಾಡಿದ್ದ ವಿಡಿಯೋ ಪೋಸ್ಟ್​​​ ವೈರಲ್‌ ಆಗಿತ್ತು. ಈ ಪೋಸ್ಟ್​ನಲ್ಲಿ ಅವರು ಗೃಹ ಸಚಿವ ಎಂ.ಬಿ.ಪಾಟೀಲ್‌ ಸೇರಿದಂತೆ ಹಲವರು ಹಿಂದೂ ಧರ್ಮ ಒಡೆಯಲು ಯತ್ನಿಸಿದ್ದಾರೆ ಅಂತಾ ಆರೋಪಿಸಿ, ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದರು ಎನ್ನಲಾಗಿದೆ. ಹೀಗಾಗಿ ಅವರನ್ನ ಧಾರವಾಡ ಗ್ರಾಮೀಣ ಠಾಣೆ ಪೊಲಿಸರು ಬಂಧಿಸಿ, ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎನ್ನಲಾಗಿದೆ. ಬಂಧಿತ ಮಹಿಳೆ ಶ್ರುತಿ ಪತಿ ಅಮರೇಶ ಉಳವಣ್ಣವರ್, ಈ ಹಿನ್ನೆಲೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv