ಮಹಿಳಾ, ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಯಿಂದ ಕಿರುಕುಳ

ಬೀದರ್: ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಉಪ ನಿರ್ದೇಶಕನ ಮೇಲೆ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ. ಜಿಲ್ಲೆಯ ಬಸವಕಲ್ಯಾಣದಲ್ಲಿ ಎಂಎಸ್​​ಪಿಸಿ ಎಂಬ ಎನ್​​ಜಿಒ ಇದ್ದು, ಅದರಲ್ಲಿ 22 ಮಹಿಳೆಯರು ಕೆಲಸ ಮಾಡುತ್ತಾರೆ. ಇವರ ಮೇಲಾಧಿಕಾರಿಯಾದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಮಂಜುನಾಥ್ ಎಂಬುವವರು ಆ ಮಹಿಳೆಯರಿಗೆ ಮೈ ಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನಂತೆ.
ಎಂಎಸ್​​ಪಿಸಿ ಸಂಸ್ಥೆಯಲ್ಲಿ 22 ಮಹಿಳಾ ಸದಸ್ಯರಿದ್ದು, ಇವರು ಅಂಗನವಾಡಿ ಮತ್ತು ಗರ್ಭಿಣಿ ಮಹಿಳೆಯರಿಗೆ ಪೌಷ್ಠಿಕ ಆಹಾರ ಸರಬರಾಜು ಮಾಡುತ್ತಾರೆ. ಇದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳ ಅಡಿಯಲ್ಲಿ ಬರುತ್ತೆ. ಇದರ ಮೇಲ್ವಿಚಾರಣೆ ನೋಡಿಕೊಳ್ಳುತಿದ್ದ ಸದರಿ ಅಧಿಕಾರಿ ಮಂಜುನಾಥ್, ಮಹಿಳೆಯರ ಮೈ‌-ಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡುತ್ತಿದ್ದಾನಂತೆ.

‘ನಾನು ನಿಮ್ಮನ್ನು ನೋಡಲು ಬರುತಿದ್ದೇನೆ’
ಇದಲ್ಲದೇ ಅಧಿಕಾರಿ ಮಂಜುನಾಥ್​ ಇನ್ಸ್​​​ಪೆಕ್ಷನ್​​ಗೆಂದು ಬರುವಾಗ.. ನಿಮ್ಮನ್ನು ನೋಡಲು ಬರ್ತಾ ಇದ್ದೀನಿ ಅಂತಾ ಕಾಲ್ ಮಾಡಿ ಮಹಿಳೆಯರಿಗೆ ಹೇಳುತ್ತಾನಂತೆ. ಸಂಸ್ಥೆಗೆ ಭೇಟಿ ನೀಡಿದಾಗ ಮೈ ಕೈ ಮುಟ್ಟುತ್ತಾರಂತೆ. ಅಲ್ಲದೇ ಕೇಂದ್ರಕ್ಕೆ ಭೇಟಿ ನೀಡಿದಾಗ ನಾನು ಇನ್ಸ್​​​ಪೆಕ್ಷನ್​​​ಗೆ ಬಂದಿಲ್ಲ. ನಿಮ್ಮನ್ನು ನೋಡಲು ಬಂದಿದ್ದೇನೆ ಅಂತಾರಂತೆ. ಅಧಿಕಾರಿಯ ಈ ವರ್ತನೆಯಿಂದ ಬೇಸತ್ತ ಮಹಿಳೆಯರು ಮಾಧ್ಯಮಗಳ ಎದುರು ಅಳಲು ತೋಡಿಕೊಂಡಿದ್ದು, ಮಹಿಳಾ ಆಯೋಗಕ್ಕೆ, ರಾಜ್ಯ ಮಾನವ ಹಕ್ಕುಗಳ ಆಯೋಗ, ಬೀದರ್ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಅವರಿಗೂ ಪತ್ರ ಬರೆದಿದ್ದಾರೆ.

ತನಿಖೆಗೆ ರಾಜ್ಯ ಮಾನವ ಹಕ್ಕುಗಳ ಆಯೋಗ ಸೂಚನೆ..
ಇನ್ನು ಮಹಿಳೆಯರು ಮಂಜುನಾಥ್ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಮಾನಸಿಕ ಕಿರುಕುಳ ನೀಡಿರೋ ಬಗ್ಗೆ ಮಾನವ ಹಕ್ಕುಗಳ ಆಯೋಗಕ್ಕೂ ದೂರು ನೀಡಿರೋದ್ರಿಂದ, ಮಾನವ ಹಕ್ಕುಗಳ ಆಯೋಗವು ಜಿಲ್ಲಾಧಿಕಾರಿ ಎಚ್.ಆರ್. ಮಹದೇವ ಅವರಿಗೆ ಪತ್ರ ಬರೆದಿದ್ದು, ಮಹಿಳೆಯರು ಮಾಡಿರುವ ಆರೋಪ ನಿಜವೇ ಆದಲ್ಲಿ ಅಧಿಕಾರಿ ವಿರುದ್ಧ ಕ್ರಮ ಕೈಗೊಂಡು ಅಯೋಗಕ್ಕೆ 6 ವಾರಗಳಲ್ಲಿ ವರದಿ ನೀಡುವಂತೆ ಪತ್ರದ ಮೂಲಕ ಸೂಚಿಸಿದೆ.


Follow us on:

YouTube: firstNewsKannada  Instagram: firstnews_tv  Face Book: firstnews.tv  Twitter: firstnews_tv