ಹೇರ್​ ಡೈ ಬಳಸೋರು ಓದಲೇಬೇಕಾದ ಸ್ಟೋರಿ ಇದು..!

ಪ್ರತಿನಿತ್ಯ ಹೊಗೆ, ಧೂಳಿನಲ್ಲಿ ಓಡಾಡೋದ್ರಿಂದ, ಬೇರೆ ಬೇರೆ ಶ್ಯಾಂಪೂಗಳ ಬಳಕೆಯಿಂದ ಕೂದಲು ತನ್ನ ಕಾಂತಿ ಕಳೆದುಕೊಳ್ಳುತ್ತೆ. ಚಿಕ್ಕ ವಯಸ್ಸಿಗೆ ಕೂದಲು ಬೆಳ್ಳಗಾಗುತ್ತೆ. ಇದ್ರಿಂದ ಆದಷ್ಟು ಬೇಗ ಪರಿಹಾರ ಕಂಡುಕೊಳ್ಳೋರು ಮೊದಲು ಸೆಲೆಕ್ಟ್​ ಮಾಡೋದೇ ಹೇರ್​ ಡೈ. ಮಾರ್ಕೆಟ್​ನಲ್ಲಿ ಒಂದಾ… ಎರಡಾ….ನೂರಾರು ಕಂಪನಿಗಳ ಹೇರ್​ ಡೈ ಸಿಗುತ್ತೆ. ಹಾಗಂತ ಯಾವುದೋ ಒಂದು ಅಂತ ನೀವು ಕೂದಲಿಗೆ ಹಚ್ಚೋ ಮೊದಲು ಎಚ್ಚರ.

ಯಾಕಂದ್ರೆ ಫ್ರಾನ್ಸ್​ ಮೂಲದ ಎಸ್ಟೆಲ್ ಎಂಬ 19 ವರ್ಷದ ಯುವತಿ ಹೇರ್​ ಡೈ ಬಳಸಿದ್ದ ಪರಿಣಾಮ ಆಕೆಯ ಮುಖ ಮತ್ತು ಕಣ್ಣಿನ ಭಾಗ ಊದಿಕೊಂಡು ತುಂಬಾ ನೋವು ಅನುಭವಿಸಿದ್ದಾರೆ. ಪ್ಯಾರಾ ಫಿನಾಯ್ಲೆನ್​ಡೈಮಿನ್ (ಪಿಪಿಡಿ) ಎಂಬ ರಾಸಾಯನಿಕ ಅಂಶದಿಂದ ನನಗೆ ಈ ತೊಂದರೆಯಾಗಿದೆ ಅಂತಿದ್ದಾರೆ ಎಸ್ಟೆಲ್.  ಈ ಪಿಪಿಡಿಯನ್ನು ಗಾಢ ಬಣ್ಣದ ಹೇರ್​ ಡೈ ಮತ್ತು ಮೇಕಪ್​ಗಳಲ್ಲಿ ಬಳಸಲಾಗುತ್ತೆ. ಈ ಅಂಶವಿರುವ ಹೇರ್​ಡೈಯನ್ನು ಎಸ್ಟೆಲ್, ಟೆಸ್ಟ್​ ಮಾಡೋದಕ್ಕಾಗಿ ಸ್ವಲ್ಪ ಪ್ರಮಾಣದಲ್ಲಿ ಅದನ್ನ ಬಳಸಿದ್ದಾರೆ. ಆದ್ರೆ ಅದು ಸ್ವಲ್ಪ ಹೊತ್ತಲ್ಲೇ ರಿಯಾಕ್ಟ್​ ಆಗಿದ್ದು ಮುಖವು ಸ್ವಲ್ಪ ಸ್ವಲ್ಪವೇ ಊದಿಕೊಳ್ಳುತ್ತಾ ಬಂದಿದೆ. ಅಲ್ಲದೇ ಮುಖದಲ್ಲಿ ತುರಿಕೆ​ ಉಂಟಾಗಿ ಅಲರ್ಜಿಯಂತೆ ಆಗಿದೆ. ನಂತರ ಅವರು ಮಾತ್ರೆಗಳನ್ನು ತೆಗೆದುಕೊಂಡರೂ ಪ್ರಯೋಜನವಾಗಿಲ್ಲ. ರಾತ್ರಿ ಮಲಗಿ ಬೆಳಗ್ಗೆ ಏಳುವುದರ ಒಳಗೆ ಮುಖವು ಬಲ್ಬ್​ನಂತೆ ಊದಿಕೊಂಡಿತ್ತು. ಇದ್ರಿಂದ ಅವರಿಗೆ ಉಸಿರಾಡಲೂ ಕಷ್ಟವಾಗಿತ್ತು.

ಎಸ್ಟೆಲ್​ರನ್ನ ಆಸ್ಪತ್ರೆಯಲ್ಲಿ ಒಂದು ದಿನ ಅಬ್ಸರ್​ವೇಶನ್​ನಲ್ಲಿ ಇಟ್ಟು ಚಿಕಿತ್ಸೆ ಕೊಡಲಾಗಿದೆ. ಬಳಿಕ ಅವರ ಮುಖದ ಊತ ಸ್ವಲ್ಪ ಸ್ವಲ್ಪವೇ ಇಳಿಯುತ್ತಾ ಬಂದಿದ್ದು ಈಗ ಆರಾಮಾಗಿದ್ದಾರೆ. ನೀವು ಹೇರ್​ ಡೈ ಬಳಸ್ತಿದ್ರೆ ಮೊದಲು ಆ ಪ್ರಾಡಕ್ಟ್​ ಬಗ್ಗೆ ಸಂಪೂರ್ಣ​ ಮಾಹಿತಿ ಪಡ್ಕೊಂಡು ನಂತರ ಬಳಸಿ. ಇಲ್ಲದಿದ್ರೆ ಎಸ್ಟೆಲ್‌ ಅನುಭವಿಸಿದ ತೊಂದರೆ ನಿಮಗೂ ಬರಬಹುದು.