ಮಹಿಳಾ ಪೊಲೀಸ್‌ಗೆ ‘ಲವ್‌’ ದೋಖಾ!

ಬೆಂಗಳೂರು: ನಗರದಲ್ಲಿ ಕಾನೂನು ಕಾಪಾಡುವ ಪೊಲೀಸರಿಗೇ ರಕ್ಷಣೆ ಇಲ್ಲದಂತಾಗಿದೆ. ಕೀಚಕನೊಬ್ಬ ಮಹಿಳಾ ಪೊಲೀಸ್​ ಪೇದೆಯನ್ನೇ ವಂಚಿಸಿ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ.

ಬೆಂಗಳೂರು ನಗರದ ಪೊಲೀಸ್​ ಠಾಣೆಯೊಂದರಲ್ಲಿ ಪೇದೆಯಾಗಿರುವ ಸಂತ್ರಸ್ಥೆಯನ್ನು ಬಾಗಲ ಕೋಟೆಯ ಜಮಖಂಡಿ ಮೂಲದ ಅಮೀನ್​ ಸಾಬ್ ಮದುವೆಯಾಗುವುದಾಗಿ ನಂಬಿಸಿ, ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಅಂತಾ ಆರೋಪಿಸಲಾಗಿದೆ.
2015ರಲ್ಲಿ ವಿಜಯಪುರದಲ್ಲಿ ಕೆಎಎಸ್​ ಮತ್ತು ಪಿಎಸ್​ಐ ಕೋಚಿಂಗ್​ ವೇಳೆ ಮಹಿಳಾ ಪೇದೆಗೆ ಅಮೀನ್​ ಸಾಬ್​ನ​ ಪರಿಚಯವಾಗಿತ್ತು. ಪರಿಚಯ ಪ್ರೀತಿಗೆ ತಿರುಗಿತ್ತು. ಕಳೆದ ಮೂರು ವರ್ಷದಿಂದಲೂ ಮಹಿಳೆಯನ್ನು ಮದುವೆಯಾಗುವುದಾಗಿ ಆತ ನಂಬಿಸಿದ್ದ. ಮದುವೆಯಾಗುವುದಾಗಿ ಹೇಳಿ ಬೆಂಗಳೂರಿಗೆ ಕರೆತಂದು, ಉಪ್ಪಾರಪೇಟೆಯ ಲಾಡ್ಜ್​ವೊಂದರಲ್ಲಿ ಲೈಂಗಿಕ ದೌರ್ಜನ್ಯವೆಸಗಿದ್ದಾನಂತೆ. ನಂತರ ಜಾತಿ, ಧರ್ಮದ ನೆಪವೊಡ್ಡಿ ಮದುವೆಯಾಗಲು ನಿರಾಕರಿಸಿದ್ದಾನೆ ಅಂತಾ ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಮೀನ್ ಸಾಬ್ ವಿರುದ್ಧ ಮಹಿಳಾ ಪೇದೆ ಉಪ್ಪಾರಪೇಟೆ ಪೊಲೀಸ್​ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ಉಪ್ಪಾರಪೇಟೆ ಠಾಣೆಯಲ್ಲಿ ಅತ್ಯಾಚಾರ ಮತ್ತು ಜಾತಿನಿಂದನೆ ಅಡಿಯಲ್ಲಿ ದೂರು ದಾಖಲಾಗಿದೆ. ದೂರು ದಾಖಲಾಗ್ತಿದ್ದಂತೆ ಅಮೀನ್​ ಸಾಬ್ ನಾಪತ್ತೆಯಾಗಿದ್ದಾನೆ. ಉಪ್ಪಾರಪೇಟೆ ಪೊಲೀಸರು ಆರೋಪಿ ಅಮೀನ್​ ಸಾಬ್​ಗಾಗಿ ಹುಡುಕಾಟ ನಡೆಸಿದ್ದಾರೆ. ಇನ್ನು ನನಗೆ ಅಮೀನ್​ ಸಾಬ್​ ಕುಟುಂಬದವರಿಂದ ಜೀವ ಬೆದರಿಕೆ ಕರೆಗಳು ಬರುತ್ತಿವೆ ಅಂತಾ ಮಹಿಳೆ ಆರೋಪಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv