ಬಡ್ಡಿ ವ್ಯವಹಾರ ನಡೆಸುತಿದ್ದ ಮಹಿಳೆಯ ಬರ್ಬರ ಹತ್ಯೆ..!

ಉಡುಪಿ: ಬಡ್ಡಿ ವ್ಯವಹಾರ ಮತ್ತು ಜಿಮ್ ನಡೆಸುತ್ತಿದ್ದ ಕಾರ್ಕಳದ ಅಯ್ಯಪ್ಪ ನಗರದ ನಿವಾಸಿ ಫ್ಲೋರಿನ್ ಡಿಸೋಜ(54) ಅವರನ್ನು ದುಷ್ಕರ್ಮಿಗಳು ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈದಿದ್ದಾರೆ. ಅಲ್ಲದೆ ಮನೆಯಲ್ಲಿದ್ದ ದ್ವಿಚಕ್ರ ವಾಹನ ಮತ್ತು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಡಿಸೋಜಾ ತನ್ನ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. ಆದ್ರೆ ಕೃತ್ಯ ನಡೆದ ದಿನ ಮನೆಯಲ್ಲಿ ಒಂಟಿಯಾಗಿದ್ದರು ಎನ್ನಲಾಗ್ತಿದೆ. ಸ್ಥಳಕ್ಕಾಗಮಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ವ್ಯಾವಹಾರಿಕ ಕಾರಣಕ್ಕೆ ಕೊಲೆ ಮಾಡಿದ್ದಾರೆ ಎಂದು ಶಂಕಿಸಿದ್ದಾರೆ. ಈ ಸಂಬಂಧ ಕಾರ್ಕಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv