ಗೊಂಬೆಯಲ್ಲ ಇದು ನಿಜ ಕುದುರೆ, ಬಿಡಿಸಿದರು ಯಾರು ಈ ಚಿತ್ತಾರ?!!

ಮ್ಯಾಂಚೆಸ್ಟರ್: ಫ್ಯಾಷನ್..! ಈ ಪದ ಈಗ ಈಗ ಕೇವಲ ಮನುಷ್ಯರಿಗಷ್ಟೇ ಸೀಮಿತವಾಗಿ ಉಳಿದಿಲ್ಲ. ಟ್ರೆಂಡಿಯಾಗಿ ಕಾಣಲು ಇಂದು ಪ್ರಾಣಿಗಳೂ ಹಾತೊರೆಯುತ್ತಿರುವಂತೆ ಭಾಸವಾಗುತ್ತಿವೆ. ಪ್ರಾಣಿಗಳು ಹಾತೊರೆಯದಿದ್ದರೂ, ಅವುಗಳ ಮಾಲೀಕರಂತೂ ಹಾತೊರೆದೇ ತೊರೆಯುತ್ತಾರೆ. ಅದ್ರಲ್ಲೂ ಈ ಯುವತಿಯ ಕೈ ಚಳಕ ಕಂಡರೆ ಎಂಥವರೂ ಫಿದಾ ಆಗೇ ಆಗ್ತಾರೆ. ಅದ್ರಲ್ಲೂ ಕುದುರೆಗಳಿಗೇ ವಿವಿಧ ರೀತಿಯ ವಿನ್ಯಾಸದಲ್ಲಿ ಕ್ಷೌರ ಮಾಡಿ ಜಾಗತಿಕ ಮನ್ನಣೆ ಗಳಿಸಿದ್ದಾರೆ. ಹೌದು ಗ್ರೇಟರ್ ಮ್ಯಾಂಚೆಸ್ಟರ್​​ನ ಬುಱ ಮೂಲದ ಮೆಲೊಡಿ ಹೇಮ್ಸ್ ಎಂಬ ಮಹಿಳೆ ಕ್ಷೌರ ಕಲೆಯ ವಿನ್ಯಾಸ ಮಾಡುವುದನ್ನೇ ಕಾಯಕವಾಗಿಸಿಕೊಂಡಿದ್ದು, ಅನೇಕ ಕುದುರೆಗಳಿಗೆ ಕೇಶ ವಿನ್ಯಾಸ ಮಾಡಿದ್ದಾರೆ.

ಕುದುರೆಗೆ ಕ್ಷೌರ ಅಥವಾ ಕೇಶ ವಿನ್ಯಾಸ ಮಾಡುವುದು ಅಂದ್ರೆ ಸ್ವಲ್ಪ ಕ್ಲಿಷ್ಟಕರವೇ. ಮನುಷ್ಯರಿಗಾದ್ರೆ ಹೇಳಿ, ಕೂಡಿಸಿ ಕ್ಷೌರ ಮಾಡಬಹುದು. ಆದ್ರೆ ಕುದುರೆಗಳಿಗೆ ಹಾಗಲ್ಲ. ಹಾಗಾಗಿ ಒಂದೊಂದು ಕುದುರೆಗೆ ಕೇಶ ವಿನ್ಯಾಸ ಮಾಡುವುದೆಂದ್ರೆ 1 ತಿಂಗಳಾದ್ರೂ ಹಿಡಿಸುತ್ತದೆ ಎನ್ನುತ್ತಾರೆ ಮೆಲೊಡಿ ಹೇಮ್ಸ್.

ವಿಶೇಷ ಅಂದ್ರೆ 32 ವರ್ಷದ ಅಮೆರಿಕದ ಮೆಲೊಡಿ ಹೇಮ್ಸ್, ಹಾರ್ಸ್​ ಬ್ಯೂಟಿಷಿಯನ್​​ ಕೋರ್ಸ್ ಅನ್ನೋ ಹಾಗೆ ಕುದುರೆಗಳಿಗೂ ಹೇರ್​ ಟ್ರಿಮ್​ ಮಾಡುವ ಕೋರ್ಸ್​​ ಅನ್ನೂ ನಡೆಸುತ್ತಿದ್ದಾರೆ. ಮುಂದೆ ಇನ್ನೂ ದೊಡ್ಡ ಪ್ರಮಾಣದಲ್ಲಿ ಕುದುರೆಗಳಿಗೆ ಹೇರ್​ ಟ್ರಿಮ್ ವಿಸ್ತರಿಸಲು ಇಂಟರ್​ನೆಟ್​​ ಮೂಲಕ ಹೆಚ್ಚು ಹೆಚ್ಚು ಯುವಕರನ್ನು ತಲುಪುವುದಾಗಿ ಮೆಲೊಡಿ ಹೇಮ್ಸ್ ಹೇಳುತ್ತಾರೆ. 9 ವರ್ಷಗಳ ಬಾಲಕಿಯಾಗಿದ್ದಾಗ ಮೆಲೊಡಿ ಹೇಮ್ಸ್ ಕುದುರೆಗಳಿಗೆ ಹೇರ್​ ಕಟ್​ ಮಾಡಲು ಆರಂಭಿಸಿದರು. ಮುಂದೆ ಅದನ್ನೇ ವೃತ್ತಿಯನ್ನಾಗಿಸಿಕೊಂಡು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡರು.