ಅವಧಿಗೆ ಮುನ್ನವೇ ಹೆರಿಗೆ, ತ್ರಿವಳಿ ಮಕ್ಕಳು ಸಾವು

ದಾವಣಗೆರೆ: ಜಗಳೂರು ತಾಲೂಕಿನ ಬಿಳಿಚೋಡು ಗ್ರಾಮದಲ್ಲಿ ಮಹಿಳೆಯೊಬ್ಬರು 3 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆದ್ರೆ ಅವಧಿಗೆ ಮುನ್ನವೇ ಹೆರಿಗೆಯಾದ ಕಾರಣ ಮೂರೂ ‌ಮಕ್ಕಳು ಸಾವನ್ನಪ್ಪಿವೆ. ಬಿಳಿಚೋಡು ಗ್ರಾಮದ ನಿವಾಸಿ ಕಾವೇರಿ ಎಂಬಾಕೆಗೆ ಇಂದು ಬೆಳಿಗ್ಗೆ 4.30ರ ಸುಮಾರಿಗೆ ಹೆರಿಗೆ‌ ನೋವು ಕಾಣಿಸಿಕೊಂಡಿತ್ತು. ಅವರನ್ನ ಅ್ಯಂಬುಲೆನ್ಸ್​ನಲ್ಲಿ ಆಸ್ಪತ್ರೆಗೆ ಸಾಗಿಸುವಾಗ ಹೆರಿಗೆಯಾಗಿ ಎರಡು ಹೆಣ್ಣು ಹಾಗೂ ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. 300 ರಿಂದ 350 ಗ್ರಾಂ ತೂಕವಿದ್ದ ಮಕ್ಕಳು ಮೃತಪಟ್ಟಿವೆ.