ಹಣ ಡಬ್ಲಿಂಗ್​​​ ವಂಚನೆ: ಮಹಿಳೆಯನ್ನ ಹಿಡಿದು ಪೊಲೀಸರಿಗೊಪ್ಪಿಸಿದ ಸ್ಥಳೀಯರು

ತುಮಕೂರು: ಹಣ ಡಬಲ್​ ಮಾಡುತ್ತೇನೆ ಎಂದು ಹೇಳಿ ಕೋಟಿಗಟ್ಟಲೇ ಹಣ ಪಡೆದು ಪರಾರಿಯಾಗಿದ್ದ ಯೂನಿಟ್​ ಮಾರ್ಟ್​ ಖಾಸಗಿ ಫೈನಾನ್ಸ್​ ಕಂಪನಿಯ ವಂಚಕಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಸುಗ್ಗನಹಳ್ಳಿಯಲ್ಲಿ ನಡೆದಿದೆ.

3 ತಿಂಗಳ ಹಿಂದೆ ಯೂನಿಟ್​​ ಮಾರ್ಟ್​ ಖಾಸಗಿ ಫೈನಾನ್ಸ್​​ ಶುರು ಮಾಡಿ ಮಹಿಳೆಯರಿಗೆ ನೀವು ಹಾಕಿದ ಹಣವನ್ನು ಡಬಲ್​ ಮಾಡಿಕೊಡುತ್ತೇನೆ ಎಂದು ನಿರ್ಮಲಾ ಸ್ಥಳೀಯರಿಂದ ಹಣ ಪಡೆದಿದ್ದಳು. ಆರಂಭದಲ್ಲಿ ಹಾಕಿದ ಹಣಕ್ಕೆ ಡಬಲ್​ ನೀಡಿ ವಿಶ್ವಾಸ ಗಳಿಸಿಕೊಂಡಿದ್ದಳು. ಇನ್ನು ನಿರ್ಮಲಾ ಹಣ ಡಬಲ್​ ಮಾಡಿಕೊಡುತ್ತಾಳೆ ಎಂದು ನಂಬಿ ತಾಲೂಕಿನ ಪುರ, ಬಂಡೀಹಳ್ಳಿ, ಮದ್ದೂರು, ನವಿಲೆ, ಕಿರಂಗೂರು ಸೇರಿದಂತೆ ಹಲವು ಗ್ರಾಮದ ಮಹಿಳೆಯರು ಈಕೆಗೆ ಹಣ ನೀಡಿದ್ದರು. ಹೀಗೆ ಸಾಕಷ್ಟು ಮಹಿಳೆಯರನ್ನ ನಂಬಿಸಿ ಸುಮಾರು 5 ಕೋಟಿಗೂ ಹೆಚ್ಚು ಹಣವನ್ನು ಪಡೆದುಕೊಂಡು ನಿರ್ಮಲಾ ಪರಾರಿಯಾಗಿದ್ದಳು.

ಈ ಕುರಿತು ಹಣ ನೀಡಿದ ಮಹಿಳೆಯರು ಪೊಲೀಸರಿಗೆ ದೂರು ನೀಡಿದರೂ ಆಕೆಯನ್ನು ಬಂಧಿಸಿರಲಿಲ್ಲ ಎನ್ನಲಾಗಿದೆ. ನಿನ್ನೆ ವಂಚನೆಗೊಳಗಾದ ಮಹಿಳೆಯರು ನಿರ್ಮಲಾಳನ್ನು ಪತ್ತೆ ಹಚ್ಚಿ ಹುಲಿಯೂರುದುರ್ಗ ಪೊಲೀಸರಿಗೆ ಒಪ್ಪಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv